UNIVERSAL LIBRARY WN

OU 19864

AdVddl | IVSHAINN

ಮಣಿಕಂಠ

ಜಿ. ಫಿ. ರಾಜರತ್ನಂ

ಶಾಕ್ಯ ಸಾಹಿತ್ಯ ಮಂಟಪ ಮಲ್ಲೇಶ್ವರ, ಬೆಂಗಳೂರು

೧೯೪೧

[ ಪುಸ್ತಕದ ಎಲ್ಲಾ ಹಕ್ಕು ಗ್ರಂಥಕರ್ತರದು]

ರತ್ನನ ಶಿಶುಸಾಹಿತ್ಯ

ತುತ್ತೂರಿ ಕಡಲೆಪುರಿ ಚುಟಿಕ ಗುಲಗಂಜಿ ಕೆನೆಹಾಲು ಕಲ್ಲು ಸಕ್ಕರೆ ಕೋಳಿಕಳ್ಳ ಮೆರವಣಿಗೆ ರತ್ನನ ಬಾಲಸಾಶಿತ್ರ

ಗೌತಮ ಬುದ್ಧ ಯೇಸು ಕ್ರಿಸ್ತ

ಶ್ರೀ ರಾಮಚಂದ್ರ ನರಿಯ ಬಾಲ ಅಶೋಕ ಮೌರ್ಯ ದಾನವೀರ ಪಿಶ್ವಂತರ ಶ್ರೀ ಹರ್ಷ ವಂಚಾಯುಧ

ಮಣಿಕಂಠ

ದೊರೆಯುವ ಸ್ಥಳಗಳು : ಸತ್ಯಶೋಧನ ಪುಸ್ತ ಭಂಡಾರ, ಕೋಟೆ, ಬೆಂಗಳೂರು ಪ್ರೋಗ್ರೆಸ್‌ ಬುಕ್‌ಸ್ಟಾಲ್‌, ಮೈಸೂರು

ಜೀವನ ಪುಸ್ತಕಾಲಯ, ಧಾರವಾಡ

ಬಿನ್ನಹ

ಎರಡೂವರೆ ಸಾವಿರ ವರುಷಗಳ ಹಿಂಜೆ, ನಮ್ಮ ಭರತಭೂಮಿಯಲ್ಲಿ ಗೌತಮ ಬುದ್ದ ನೆಂಬ ಮಹಾಪುರುಷನಿದ್ದನು. ಆತನು ಜರರಿಗೆ ಧರ್ಮ ವನ್ನು ತಿಳಿಸುವುದಕ್ಕಾಗಿ ಅನೇಕ ಕತೆಗಳನ್ನು ಹೇಳುತ್ತಿದ್ದನು. ಕತೆಗಳನ್ನು “ಜಾತಕ ಕತೆಗಳು” ಎಂದು ಕರೆಯುತ್ತಾರೆ. ಅವು`ಈಗ ಪ್ರಪಂಚದಲ್ಲೆಲ್ಲಾ ಪ್ರಸಿದ್ಧವಾಗಿವೆ.

ತೆ

“ಜಾತಕ ಕತೆಗಳು? ಬುದ್ಧನ ಪೂರ್ವಜನ್ಮಗಳ ಕತೆಗಳೆಂದೂ, ಬುದ್ಧನು ಅನೇಕ ಜನ್ಮಗಳನ್ನು ಎತ್ತಿದ್ದನೆಂದೂ ಬೌದ್ಧರು ನಂಬಿದ್ದಾರೆ. ಹೀಗೆ ಅನೇಕ ಜನ್ಮಗಳನ್ನು ಎತ್ತುತ್ತಿದ್ದ ಕಾಲದಲ್ಲಿ ಅವನನ್ನು ಬೋಧಿಸತ್ತ್ವ, ಮಹಾಸತ್ತ್ಯ ಎಂದು ಕರೆಯುವುದು ವಾಡಿಕೆ.

ರೀತಿಯ “ಜಾತಕ ಕತೆಗಳು” ಐನೂರಕ್ಕೆ ಮೇಲ್ಪಟ್ಟು ಇವೆ. ಅವುಗಳಲ್ಲಿ ಮೂವತ್ತೊಂದು ಕತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ನಮ್ಮ

pe

ಕನ್ನಡದ ಮಕ್ಕಳು ಇವುಗಳನ್ನು ಓದಿ ಸಂತೋಷಪಡುವರೆಂದು ನಂಬಿದ್ದೇನೆ.

ಮೇ. ೧೯೪೧ |

ಮಲ್ಲೇಶ್ವರಂ | ಜಿ. ಪಿ. ರಾಜರತ್ನಂ

ಜಾತಕಗಳ ಹೆಸರು ಮಣಿಕಂಠ ಅಸದೃಶ

ಗೃಥ್ರ ತಿಲಮುಷ್ತಿ ಕಾಮ ನೀತ ಸೃಗಾಲ

ಉರಗ ಕೇಳೀಶೀಲ ವೀರಕ ಗೂಥಪ್ರಾಣ ಕಿಂಶುಕೋಪಮ ಶ್ರೀ ಮಣಿಚೋರ ಮತ್ತೊ ೋದ್ದಾನ ಬಲಾಹಾಶ್ರ ತಿಂಡುಕ

ನಿವರ

ಪುಟ

ಜಾತಕಗಳ ಹೆಸರು ಇಂದ್ರಸಮಾನಗೋತ್ರ ಕಲಾಯಮುಷ್ಟಿ ಭದ್ರಘಟ

ಮಹಾ ವಾಣಿಜ ಜವನ ಹಂಸ

ಧರ್ಮ ತಂಡುಲನಾಳಿ ಸಂಜೀವ ದೇವಧರ್ಮ ಅನುಶಾಸಿಕಾ ಅಕಾಲರಾಫಿ ಮಹಾಶೀಲವಂತ ತ್ರಿಪರೈಸ್ತ ವಾತಮೃಗ

ವರ್ತಕ

ಪುಟ ೫೦ ೫೨ ೫೪ ೫೫ ೫೮ ೬೫ ೬೭ ೭೦

೭೧

ಮಣಿಕಂಠ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲ್ಳು ಬೋಧಿಸತ್ತ್ವನು ಮಹಾವಿಭವದ ಬ್ರಾಹ್ಮಣಕುಲದಲ್ಲಿ ಜನ್ಮ ತಾಳಿ ದನು. ಅವನು ಓಡಿಯಾಡುತ್ತಾ ತಿರುಗುವ ವೇಳೆಗೆ ಇನ್ನೊಂದು ಪುಣ್ಯವಂತ ಜೀವ ಅವನ ತಾಯ ಹೊಟ್ಟಿ ಯಲ್ಲಿ ಜನ್ಮ ತಾಳಿತು.

ಇಬ್ಬರು ಸೋದರರೂ ವಯಸ್ಸು ಬಂದ ಮೇಲೆ ತಾಯಿತಂದೆ ಕಾಲವಾದುದಕ್ಕೆ ನೊಂದ್ಳ್ಕು ಮನೆಬಿಟ್ಟು ಹೋಗಿ ಖುಹಿಗಳಾಗಿ, ಗಂಗಾ ತೀರದಲ್ಲಿ ಸರ್ಣಶಾಲೆ ಮಾಡಿಕೊಂಡು ವಾಸಿಸಿದರು. ಅವರಲ್ಲಿ ಹಿರಿ ಯವನ ಪರ್ಣಶಾಲೆ ಮೇಲುಗಂಗೆಯ ಬಳಿ ಇತ್ತು ಕಿರಿಯವನದು ಕೆಳಗಂಗೆಯ ಬಳಿ ಇತ್ತು.

ಆಗ ಒಂದು ದಿವಸ ಮಣಿಕಂಠನೆಂಬ ನಾಗರಾಜನು ಮನೆಯಿಂದ ಹೊರಗೆಹೊರಟ್ಕು ಗಂಗಾತೀರದಲ್ಲಿ ಹುಡುಗನ ವೇಷದಿಂದ ತಿರುಗುತ್ತಾ ಕಿರಿಯವನ ಆಶ್ರಮಕ್ಕೆ ಹೋಗಿ, ವಂದಿಸಿ, ಒಂದು ಕಡೆ ಕುಳಿತನು. ಅವರು ಒಬ್ಬರೊಡನೆ ಒಬ್ಬರು ಸಂತೋಷದ ಮಾತುಗಳನ್ನು ಆಡಿ ವಿಶ್ವಾಸಿಗಳಾದರು, ಒಬ್ಬರನ್ನು ಬಿಟ್ಟು ಒಬ್ಬರು ಇರಲಾರದಾದರು.

ಮಣಿಕಂಠನು ಆಗಾಗ್ಗೆ ಕೆರಿಯತಾಪಸನ ಬಳಿಗೆ ಬಂದು, ಮಾತ ನಾಡುತ್ತಾ ಕುಳಿತು ಹೊರಡುವಾಗ ತಾಪಸನ ಮೇಲಿನ ಸ್ನೇಹದಿಂದ ತನ್ನ ರೂಪುಬಿಟ್ಟು ಹಾವಿನ ಸುರುಳಿಗಳಿಂದ ತಾಪಸನನ್ನು ಸುತ್ತಿ ತಬ್ಬಿ ಕೊಂಡು, ತಲೆಯಮೇಲೆ ದೊಡ್ಡ ಹೆಡೆಯನ್ನು ಧರಿಸಿ, ಸ್ವಲ್ಪ ನಿದ್ರೆ ಮಾಡಿ, ಸ್ನೇಹೆವನ್ನು ತೃಪ್ತಿ ಪಡಿಸಿಕೊಂಡು, ಶರೀರವನ್ನು ಸಡಿಲಿಸಿ ತಾಪಸನಿಗೆ ವಂದಿಸಿ, ತನ್ನ ಮನೆಗೆ ಹೋಗುತ್ತಿದ್ದನು.

ತಾಪಸನು ಹಾವಿನ ಭಯದಿಂದ ಕೃಶವಾದನು, ಮಂಕಾದನು, ಕಾಂತಿಹೀನನಾದನು, ಹಳದಿಯ ಬಣ್ಣವಾದನು. ಅವನ ಮೈಮೇಲೆ ರಕ್ತ ನಾಳಗಳು ಎದ್ದು ಕಾಣುತ್ತಿದ್ದವು.

ಕಿರಿಯವನು ಒಂದು ದಿನ ಅಣ್ಣನ ಬಳಿಗೆ ಹೋದನು.

ಮಣಿಕಂಠ

ಅವನು “ನೀನು ಏಕೆ ಹೀಗಾದೆ?” ಎಂದು ಕೇಳಿದನು.

ಕಿರಿಯವನು ನಡೆದುದೆಲ್ಲವನ್ನೂ ತಿಳಿಸಲ್ಕು “ಏನು? ನೀನು ನಾಗರಾಜನು ಪುನಃ ಬರಬೇಕೆನ್ನುವೆಯ? ಬೇಡನೆನ್ನುವನೆಯ? ಎಂದನು.

ಅವನು ಬರುವುದು ನನಗೆ ಇಷ್ಟವಿಲ್ಲ.”

“ಆ ನಾಗರಾಜ ನಿನ್ನ ಬಳಿ ಬರುವಾಗ ಏನು ಅಲಂಕಾರ ಧರಿಸಿ ಕೊಂಡು ಬರುವನು? ?

ಒಂದು ಮಣಿರತ್ನವನ್ನು ಧರಿಸಿಕೊಂಡು ಬರುವನು.”

" ಹಾಗಾದರೆ, ನಾಗರಾಜ ನಿನ್ನ ಬಳಿ ಬಂದು ಕುಳಿತು ಕೊಳ್ಳು ವುದರೊಳಗೇ "ಮಣಿಯನ್ನು ನನಗೆ ಕೊಡು’? ಎಂದು ಬೇಡು. ಇದರಿಂದ ನಾಗ ನಿನ್ನ ಸುತ್ತಾ ತನ್ನ ಮೈಯನ್ನು ಬಳಸದೆಯೇ ಹೋಗುವನು. ಮರುದಿವಸ ಆಶ್ರಮದ್ವಾರದಲ್ಲಿ ನಿಂತು ಅವನು ಬರುವಾಗಲೇ ಅದನ್ನು ಬೇಡು. ಮೂರನೆಯ ದಿವಸ ಗಂಗಾತೀರದಲ್ಲಿ ನಿಂತು, ಅವನು ನೀರಿನಿಂದ ಏಳುವಾಗಲೇ ಅದನ್ನು ಬೇಡು. ಹೀಗೆ ಮಾಡಿದರೆ, ಅವನು ಪುನಃ ನಿನ್ನ ಬಳಿ ಬರುವುದಿಲ್ಲ.”

ತಾಪಸನು ಒಳ್ಳೆಯದೆಂದು ಹೇಳಿ, ತನ್ನ ಪರ್ಣಶಾಲೆಗೆ ಹೋದನು.

ಮರುದಿವಸ. ನಾಗರಾಜ ಬಂದು ನಿಂತೊಡನೆಯೇ ನಿನ್ನ ಅಲಂಕಾರಮಣಿಯನ್ನು ನನಗೆ ಕೊಡು” ಎಂದು ಬೇಡಿದನು. ಅವನು ಕುಳಿತುಕೊಳ್ಳದೆಯೇ ಪಲಾಯನಮಾಡಿದನು.

ಕರಿಯವನು ಎರಡನೆಯ ದಿವಸ ಆಶ್ರಮದ್ವಾರದಲ್ಲಿ ನಿಂತ್ರು ನಾಗರಾಜನು ಬರುತ್ತಿರುವಾಗಲೇ ನಿನ್ನೆ ಮಣರತ್ನವನ್ನು ನನಗೆ ಕೊಡಲಿಲ್ಲ. ದಿನ ಅದು ನನಗೆ ದೊರಕಬೇಕು” ಎಂದನು. ನಾಗರಾಜನು ಆಶ್ರಮದೊಳಕ್ಕೆ ಬರದೆಯೇ ಓಡಿಹೋದನು.

ಮೂರನೆಯ ದಿವಸ್ತ ನಾಗನು ನೀರಿನಿಂದ ಏಳುತ್ತಿರುವಾಗಲೇ ಕಿರಿಯವನು “ನಾನು ನಿನ್ನನ್ನು ಬೇಡುತ್ತಿರುವುದು ಇದು ಮೂರನೆಯ ದಿವಸ. ಆದ್ದರಿಂದ ನನಗೆ ಮಣರತ್ವ ಕೊಡು” ಎಂದನು.

ಮಣಿಕಂಠ ಷಿ

ನಾಗರಾಜನು ನೀರಿನಲ್ಲಿ ನಿಂತಂತೆಯೇ ತಾಪಸನ ಪ್ರಾರ್ಥನೆ ಯನ್ನು ತಿರಸ್ಕರಿಸುತ್ತಾ ಮಣಿಯಿಂದ ನನಗೆ ಬಹಳ ಅನ್ನಪಾನ ಲಭಿಸುತ್ತಿದೆ. ನಾನು ಇದನ್ನು ನಿನಗೆ ಕೊಡುವುದಿಲ್ಲ. ನೀನು ಅತಿಯಾಗಿ ಬೇಡುವೆ. ನಾನು ಇನ್ನು ನಿನ್ನ ಆಶ್ರಮಕ್ಕೆ ಬರುವುದಿಲ್ಲ. ಹದಗೊಳಿಸಿ ಹರಿತಮಾಡಿದ ಕತ್ತಿಯನ್ನು ಹಿಡಿದು ಹುಡುಗರು ಹೆದರಿಸುವಂತೆ ನೀನು ಮಣಿಯನ್ನು ಬೇಡಿ ನನ್ನನ್ನು ಹೆದರಿಸುತ್ತಿರುವೆ. ನಾನು ಇದನ್ನು ನಿನಗೆ ಕೊಡುವುದಿಲ್ಲ. ನೀನು ಅತಿಯಾಗಿಬೇಡುವೆ. ನಾನು ಇನ್ನುನಿನ್ನಆಶ್ರಮಕ್ಕೆ ಬರುವುದಿಲ್ಲ” ಎಂದನು. ನಾಗರಾಜನು ಹೀಗೆ ಹೇಳುತ್ತಾ ನೀರಿನಲ್ಲಿ ಮುಳುಗಿ, ತನ್ನ ನಾಗಭವನಕ್ಕೆ ಹೋಗಿ, ಪುನಃ ಹಿಂದಿರುಗಲಿಲ್ಲ.

ಆಗ ತಾಪಸನು ಕಣ್ಣಿಗೆ ಚೆನ್ನಾದ ನಾಗರಾಜನನ್ನು ಕಾಣ ದುದರಿಂದ ಇನ್ನೂ ಕೃಶವಾದನು ಮಂಕಾದನು, ಕಾಂತಿಹೀನನಾದನುು ಹಳದಿಯ ಬಣ್ಣ ವಾದನು. ಮೈ ತುಂಬ ರಕ್ತನಾಳಗಳು ಇನ್ನೂ ಎದ್ದು ಕಂಡನು.

ಆಗ ಹಿರಿಯತಾಪಸನು 4 ಕಿರಿಯವನು ಹೇಗಿರುವನೋ ನೋಡೋಣ” ಎಂದು ಅವನ ಬಳಿ ಬಂದು, ಅವನು ಇನ್ನೂ ಪಾಂಡು ರೋಗಿಯಾದುದನ್ನು ಕಂಡು, ಇದೇಕೆ? ನೀನು ಇನ್ನೂ ಪಾಂಡು ರೋಗಿಯಾದೆ?” ಎಂದನು.

" ಧರ್ಶನೀಯನಾದ ನಾಗರಾಜನನ್ನು ಕಾಣದುದರಿಂದ.”

ಆಗ ಹಿರಿಯವನು ತಾಪಸನು ನಾಗರಾಜನನ್ನು ಬಿಟ್ಟರ ಲಾರ” ಎಂದು ಕಂಡುಕೊಂಡು, ಯಾರ ಪ್ರೀತಿಯನ್ನು ಆಶಿಸುನೆಯೋ ಅವರಲ್ಲಿ ಬೇಡಬೇಡ. ಅತಿಯಾಗಿ ಯಾಚಿಸುವುದರಿಂದ ದ್ರೇಷವುಂಟಾ ಗುವುದು. ಬ್ರಾ ಹ್ಮಣನು ನಾಗರಾಜನ ಮಣಿ ಬೇಡಿದನು. ಅಂದಿನಿಂದ ಅವನು ಕಣ್ಣಿಗೆ ಮರಿಯಾದನು "ಎಂದನು.

ಹೀಗೆಂದು ಕರಿಯವನಿಗೆ ಹೇಳಿ ಅದಕ್ಕಾಗಿ ಇನ್ನು ಶೋಕಪಡ ಬೇಡ” ಎಂದು ಸಂತೈಸಿ ಹಿರಿಯಣ್ಣನು ತನ್ನ ಆಶ್ರಮಕ್ಕೆ ಹೋದನು. ಅದಾದ ಅನಂತರ ಇಬ್ಬರು ಸೋದರರೂ ಅಭಿಚ್ಞೆ ಗಳನ್ನೂ ಸಮಾಸತ್ತಿ ಗಳನ್ನೂ ಉಂಟುಮಾಡಿಕೊಂಡು ಬ್ರಹ್ಮಲೋಕ ಪರಾಯಣರಾದರು. ;;

ಅಸದೃಶ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲು, ಬೋಧಿಸತ್ತ್ವನು ಅವನ ಪಟ್ಟದ ರಾಣಿಯ ಹೊಟ್ಟಿ ಯಲ್ಲಿ ಜನ್ಮ ತಾಳಿ ದನು. ಅವನು ಸುಖವಾಗಿ ಹುಟ್ಟ, ಅವನಿಗೆ ಹೆಸರಿಡುವ ದಿವಸ ಅಸದೃಶ ಕುಮಾರನೆಂದು ಹೆಸರಿಟ್ಟರು. ಅವನು ಓಡಾಡುತ್ತಾ ತಿರುಗುವ ವೇಳೆಗೆ ಇನ್ನೊಬ್ಬ ಪುಣ್ಯವಂತನು ದೇವಿಯ ಹೊಟ್ಟಿ ಯಲ್ಲಿ ಜನ್ಮತಾಳಿದನು. ಅವನೂ ಸುಖವಾಗಿ ಹುಟ್ಟ, ಅವನಿಗೆ ಹೆಸರಿಡುವ ದಿವಸ ಬ್ರಹ್ಮದತ್ತ ಕುಮಾರನೆಂದು ಹೆಸರಿಟ್ಟರು.

ಅವರಲ್ಲಿ ಬೋಧಿಸತ್ತ್ವನು ಹದಿನಾರನೆಯ ವರ್ಷದಲ್ಲಿ ತಕ್ಷಶಿಲೆಗೆ ಹೋಗಿ, ಲೋಕವಿಖ್ಯಾತನಾದ ಆಚಾರ್ಯನ ಬಳಿಯಲ್ಲಿ ಮೂರು ವೇದಗಳನ್ನೂ ಹದಿನೆಂಟು ವಿದ್ಯೆಗಳನ್ನೂ ಕಲಿತ್ಕು ಬಾಣಬಿಡುವುದರಲ್ಲಿ ಅಸದೃಶನಾಗಿ ವಾರಾಣಸಿಗೆ ಹಿಂದಿರುಗಿ ಬಂದನು.

ರಾಜನು ಸಾಯುವಾಗ "" ಅಸದೃಶಕುಮಾರನಿಗೆ ರಾಜ್ಯ ಕೊಟ್ಟು, ಬ್ರಹ್ಮದತ್ತನಿಗೆ ಉಸರಾಜ್ಯ ಕೊಡಿರಿ” ಎಂದು ಹೇಳಿ, ಕಾಲವಾದನು. ಅವನು ಕಾಲವಾಗಲು, ಬೋಧಿಸತ್ತ್ವನು ತನಗೆ ರಾಜ್ಯವನ್ನು ಕೊಡು ವಾಗ "ಆ" ನನಗೆ ರಾಜ್ಯ ಬೇಕಾಗಿಲ್ಲ'' ಎಂದು ಒಲ್ಲದೆಹೋದನು. ಬ್ರಹ್ಮದತ್ತನಿಗೇ ರಾಜ್ಯಾಭಿಷೇಕ ಮಾಡಿದರು. ಬೋಧಿಸತ್ತ್ವನು ನನಗೆ ಯಶಸ್ಸು ಬೇಕಾಗಿಲ್ಲ'' ವೆಂದು ಯಾವುದಕ್ಕೂ ಇಷ್ಟಪಡಲಿಲ್ಲ. ಚಿಕ್ಕವನು ರಾಜ್ಯವಾಳುತ್ತಿರಲು ತಾನು ಸಹಜವಾಗಿ ರಾಜನಂತೆಯೇ ಇದ್ದನು.

ರಾಜನ ಪಾದಸೇವಕರು «" ಅಸದೃಶಕುಮಾರನು ರಾಜ್ಯವನ್ನು ಆಶಿಸುವನು ?' ಎಂದು ಹೇಳುತ್ತಾ ರಾಜನ ಬಳಿ ಬೋಧಿಸತ್ತ್ವನನ್ನು ದೂರಿದರು. ಅವನು ಅವರ ಮಾತನ್ನೇ ಹಿಡಿದು ಮನಸ್ಸು ಮುರಿದವ ವಾಗಿ, "" ನನ್ನ ಅಣ್ಣನನ್ನು ಹಿಡಿಯಿರಿ'' ಎಂದು ಜನರನ್ನು ಅಟ್ಟಿ ದನು.

ಆಗ ಬೋಧಿಸತ್ತ್ವನ ಹಿತಕಾರಿಯೊಬ್ಬನು ಅದನ್ನು ಬೋಧಿ ಸತ್ತ್ವನಿಗೆ ತಿಳಿಸಿದನು. ಬೋಧಿಸತ್ತ್ವನು ತಮ್ಮನ ಮೇಲೆ ಕೋಪ ಗೊಂಡು, ಬೇರೆ ರಾಷ್ಟ್ರಕ್ಕೆ ಹೋಗಿ, « ಬಿಲ್ಲಾ ರನೊಬ್ಬನು ಬಂದು ರಾಜದ್ವಾರದಲ್ಲಿ ಸಿಂತಿರುವನು'' ಎಂದು ರಾಜನಿಗೆ ಹೇಳಿಕಳಿಸಿದನು.

ಅಸದೃಶ

ರಾಜನು " ಎಷ್ಟು ಸಂಬಳ ಕೇಳುವನು??' ಎಂದನು.

« ಓಂದು ನರ್ಷಕ್ಕೆ ನೂರು ಸಾವಿರ.”

$$ ಒಳ್ಳೆಯದು. ಬರಲಿ.

ಅವನು ಬಂದು ಸಮೀಪದಲ್ಲಿ ನಿಲ್ಲಲ್ಲು ನೀನು ಬಿಲ್ಲಾರನೋ?” ಎಂದು ರಾಜನು ಪ್ರಶ್ನಿಸಿದನು.

ಹೌಡು ದೇವ.”

ಒಳ್ಳೆಯದು. ನನ್ನನ್ನು ಸೇವಿಸು.

ಅವನು ಅಂದಿನಿಂದ ರಾಜನ ಸೇವೆಗೆ ನಿಂತನು.

ಅವನಿಗೆ ಕೊಡುವ ಸಂಬಳ ಕಂಡು, ಇವನಿಗೆ ಅತಿ ಹೆಚ್ಚು ದೊರಕುವುದು?” ಎಂದು ಹಳೆಯ ಬಿಲ್ಲಾರರು ಗೊಣಗಿದರು.

ಆಗ ಒಂದು ದಿವಸ ರಾಜನು ಉದ್ಯಾನಕ್ಕೆ ಹೋಗಿ, ಮಂಗಲ ಶಿಲಾಪಟ್ಟಿದ ಸಮೀಪದಲ್ಲಿ ಬಟ್ಟೆಯ ತೆರೆ ಹಾಕಿಸಿ ಮಾವಿನ ಮರದ ಬುಡದಲ್ಲಿ ದೊಡ್ಡ ಹಾಸಿಗೆಯ ಮೇಲೆ ಮಲಗಿ, ಮೇಲೆ ನೋಡುತ್ತಾ, ಮರದ ತುದಿಯಲ್ಲಿ ಒಂದು ಮಾವಿನ ಗೊಂಚಲನ್ನು ಕಂಡು“ ಇದನ್ನು ಮೇಲೇರಿ ಪಡೆಯುವುದು ಶಕ್ಯವಿಲ್ಲ » ಎಂದು ಬಿಲ್ಲಾರರಿಗೆ ಹೇಳಿಕಳಿಸಿ, «ಷು ಮಾವಿನ ಗೊಂಚಲನ್ನು ಬಾಣದಿಂದ ಕತ್ತರಿಸಿ ಬೀಳಿಸಲು ಆಗುವುಜಿ?” ಎಂದನು.

ಇದು ನಮಗೆ ದೊಡ್ಡದಲ್ಲ. ದೇವರು ಅನೇಕ ಸಲ ನಮ್ಮ ಕೆಲಸ ವನ್ನು ಹಂದೆ ನೋಡಿಯಾಗಿದೆ. ಈಗ ಬಂದ ಬಿಲ್ಲಾ ರನು ನಮಗಿಂತ ಹೆಚ್ಚು ಸಡೆಯುವನು. ಅವನಿಂದ ಬೀಳಿಸಬಹುದು.?

ರಾಜನು ಬೋಧಿಸತ್ತ್ವನಿಗೆ ಹೇಳಿಕಳಿಸಿ, “ಅಪ್ರ, ಬೀಳಿಸಲು ಆಗುವುಜಿ? ಎಂದು ಪ್ರಶ್ಲಿಸಿದನು.

ಆಗುವುದು, ಮಹಾರಾಜ. ಅವಕಾಶ ದೊರಕಿದರೆ ಆಗುವುದು.”

" ಎಂತಹ ಅವಕಾಶ?”

ನಿನ್ನ ಹಾಸಿಗೆಯಿರುವ ಅವಕಾಶ.”

ರಾಜನು ಹಾಸಿಗೆಯನು, ತೆಗೆಸಿ ಅನಕಾಶ ಮಾಡಿಸಿದನು.

ಇದನ್ನು

೬. ಮಣಿಕಂಠ

ಬೋಧಿಸತ್ತ್ವನ ಕೈಯಲ್ಲಿ ಬಿಲ್ಲಿರಲಿಲ್ಲ ಅದನ್ನು ಉಡುಪಿನ ಒಳಗೆ ಸನ್ನಾಹ ಮಾಡಿಕೊಂಡು ತಿರುಗಾಡುತ್ತಿದ್ದನು. ಆದ್ದರಿಂದ «`ನನಗೆ ತೆರೆ ದೊರಕಿದರೆ ಒಳ್ಳೆಯದು” ಎಂದನು. ರಾಜನು ಆಗಲೆಂದು ತೆರೆ ಯನ್ನು ತರಿಸಿ ಸುತ್ತಲೂ ಇಡಿಸಿದನು.

ಬೋಧಿಸತ್ತ್ವನು ತೆರೆಯೊಳಕ್ಕೆ ಪ್ರವೇಶಿಸಿ, ಮೇಲೆ ಹೊದೆದಿದ್ದ ಬಿಳಿಯ ವಸ್ತ್ರವನ್ನು ತೆಗೆದು, ಒಂದು ಕೆಂಪು ಬಟ್ಟಿ ಯನ್ನು ಉಟ್ಟು, ಕಚ್ಚೆ ಬಿಗಿದು, ಒಂದು ಕೆಂಪು ಬಟ್ಟೆಯನ್ನು ಹೊಟ್ಟಿಗೆ ಕಟ್ಟ, ಜೋಡಿಸಿದ್ದ ಖಡ್ಗವನ್ನು ಚೀಲದಿಂದ ಹೊರಗೆಳೆದು ಎಡಗಡೆ ಧರಿಸಿ, ಚಿನ್ನದ ಕಂಚುಕವನ್ನು ತೊಟ್ಟು, ಬಿಲ್ಲಿನ ಕೊಳೆವೆಯನ್ನು ಬೆನ್ನಿನಲ್ಲಿ ಧರಿಸಿ, ಜೋಡಿಸಿದ ಟಗರಿನ ಮಹಾಧನುಸ್ಸನ್ನು ತೆಗೆದುಕೊಂಡು ಹವಳದ ಬಣ್ಣದ ಹಗ್ಗವನ್ನು ಏರಿಸಿ, ತಲೆಗೆ ರುಮಾಲನ್ನು ಸುತ್ತಿ, ತೀಕ್ಷ್ಞೃವಾದ ಬಾಣವನ್ನು ಉಗುರುಗಳಲ್ಲಿ ತಿರುಗಿಸುತ್ತಾ, ಅಲಂಕೃತನಾದ ನಾಗ ಕುಮಾರನು ಭೂಮಿಯನ್ನು ಸೀಳಿಕೊಂಡು ಬರುವಂತೆ ತೆರೆಯನ್ನು ಇಬ್ಬಾಗಿಸಿಕೊಂಡು ಹೊರಗೆ ಬಂದು, ಬಾಣ ಬಿಡುವಲ್ಲಿಗೆ ಹೋಗಿ, ಬಾಣವನ್ನು ಹೂಡಿ, ರಾಜನನ್ನು ಕುರಿತು “ಏನು ಮಹಾರಾಜ? ಮಾವಿನ ಗೊಂಚಲನ್ನು ಮೇಲೇರುವ ಬಾಣದಿಂದ ಬೀಳಿಸಲೋ? ಅಥವಾ ಕೆಳಗಿಳಿಯುವ ಬಾಣದಿಂದ ಬೀಳಿಸಲೋ?? ಎಂದನು.

ಅಪ್ಪಾ, ಮೇಲೇರುವ ಬಾಣದಿಂದ ಬೀಳಿಸುವುದನ್ನು ನಾನು ಒಂದೆ ಬಹಳ ಕಂಡಿದ್ದೇನೆ. ಕೆಳಗಿಳಿಯುವ ಬಾಣದಿಂದ ಬೀಳಿಸುವು ದನ್ನು ನಾನು ಹಿಂದೆ ಕಂಡಿಲ್ಲ. ಕೆಳಗಿಳಿಯುವ ಬಾಣದಿಂದ ಬೀಳಿಸು.”

“ಮಹಾರಾಜ, ಬಾಣ ಬಹುದೂರ ವಿರುವುದು, ಚತುರ್ಮಹಾ ರಾಜಿಕಭವನಗಳ ವರೆಗೂ ಹೋಗಿ ತಾನಾಗಿಯೇ ಇಳಿಯುವುದು. ಅದು ಇಳಿಯುವವರೆಗೆ ತಾವು ತಾಳಬೇಕಾಗುವುದು.”

ರಾಜನು ಒಳ್ಳೆಯದೆಂದು ಒಪ್ಪಿದನು.

ಆಗ ಅವನು ಪುನ “ಮಹಾರಾಜ ಬಾಣ ಏರುವಾಗ ಮಾವಿನ ಗೊಂಚಲಿನ ತೊಟ್ಟನ್ನು ಮಧ್ಯಕ್ಕೆ ಸರಿಯಾಗಿ ಕತ್ತರಿಸುತ್ತಾ ಬರುವುದು, ಇಳಿಯುವಾಗ ಕೂದಲಿನಷ್ಟು ಕೂಡ ಈಚೆ ಆಚೆ ಹೋಗದೆ,

ಅಸದೃಶ ಶ್ರ

ನೊದಲು ಸೀಳಿದ ಕಡೆಯೇ ಬಿದ್ದು, ಮಾವಿನ ಗೊಂಚಲನ್ನು ಹಿಡಿದು ಕೊಂಡು ಇಳಿಯುವುದು. ನೋಡು, ಮಹಾರಾಜ” ಎಂದು ವೇಗವನ್ನು ಹುಟ್ಟಿ ಸಿ, ಬಾಣಬಿಟ್ಟಿ ನು.

ಬಾಣ ಮಾವಿನ ಗೊಂಚಲನ್ನು ಮಧ್ಯಕ್ಕ ಸರಿಯಾಗಿ ಕತ್ತರಿ ಸುತ್ತಾ ಏರಿತು. ಬೋಧಿಸತ್ತನು " ಬಾಣ ಚತುರ್ಮಹಾರಾಜಿಕ ಭವನಗಳ ವರೆಗೂ ಹೋಗಿರಬೇಕು” ಎಂದು ತಿಳಿದು, ಮೊದಲು ಬಿಟ್ಟ ಬಾಣಕ್ಕಿಂತ ಅಧಿಕತರವಾದ ವೇಗವನ್ನು ಹುಟ್ಟಿಸಿ, ಇನ್ನೊಂದು ಬಾಣ ಬಿಟ್ಟಿ ನು. ಅದು ಹೋಗಿ, ಮೊದಲ ಬಾಣದ ಗರಿಗೆ ಹೊಡೆದು ಅದನ್ನು ತಿರುಗಿಸಿ, ತಾನು ತ್ರಯಸ್ತ್ರಿಂಶಸ್‌ ಭವನಕ್ಕೆ ಏರಿತು. ಅಲ್ಲಿ ದೇವತೆಗಳು ಅದನ್ನು ಹಿಡಿದಿಟ್ಟು ಕೊಂಡರು.

ಹಿಂದಿರುಗಿದ ಬಾಣ ಗಾಳಿಯನ್ನು ಭೇದಿಸುವ ಶಬ್ದ ಸಿಡಿಲಿನ ಶಬ್ದ ದಂತಾಯಿತು. ಮಹಾಜನರು “ಏನು ಶಬ್ದ ಇದು?” ಎನ್ನಲ್ಕು ಬೋಧಿಸತ್ತ್ವನು ಬಂದಿರುಗುತ್ತಿರುವ ಬಾಣದ ಸದ್ದು” ಎಂದು ಹೇಳಿ, ತಮ್ಮ ತಮ್ಮ ಮೇಲೆ ಬಾಣ ಬೀಳುವುದೆಂದು ಹೆದರಿ ಬೆದರುತ್ತಿರುವ ಮಹಾ ಜನರನ್ನು ಹೆದರಬೇಡಿ” ಎಂದು ಸಂತ್ರೆಸಿ, ಬಾಣವನ್ನು ಭೂಮಿಯಲ್ಲಿ ಬೀಳಗೊಡುವುದಿಲ್ಲ” ಎಂದನು.

ಬಾಣ ಇಳಿಯುತ್ತಾ ಕೂದಲಿನಷ್ಟು ಕೂಡ ಈಕಡೆ ಆಕಡೆ ಹೋಗದೆ ಸೀಳಿನಲ್ಲಿಯೇ ಬಿದ್ದು ಮಾವಿನ ಗೊಂಚಲನ್ನು ಕತ್ತರಿಸಿತು. ಬೋಧಿಸತ್ತ್ವನು ಮಾವಿನ ಗೊಂಚಲನ್ನೂ ಬಾಣವನ್ನೂ ಭೂಮಿಯಲ್ಲಿ ಬೀಳಗೊಡದೆ, ಆಕಾಶದಲ್ಲಿಯೇ ತಡೆದು, ಒಂದು ಕ್ಸೆಯಿಂದ ಮಾವಿನ ಗೊಂಚಲನ್ನೂ ಇನ್ನೊಂದರಿಂದ ಬಾಣವನ್ನೂ ಹಿಡಿದನು.

ಮಹಾಜನರು ಆಶ್ಚರ್ಯವನ್ನು ಕಂಡ್ಕು “ನಾವು ಹಿಂದೆ ಇಂತಹವನ್ನು ಕಾಣಲಿಲ್ಲ” ಎಂದು ಮಹಾಪುರುಷನನ್ನು ಹೊಗಳಿದರು, ಹಾಡಿದರು, ಚಪ್ಪಾಳೆ ತಟ್ಟಿ ದರು, ಬೆರಳು ಹೊಡೆದರು. ಸಾವಿರಾರು ಜನ ಬಟ್ಟೆ ಗಳನ್ನು ಮೇಲೆಸೆದರು. ರಾಜಪರಿಸೆಯು ಸಂತೋಷದಿಂದ ಹಿಗ್ಗಿ ಬೋಧಿಸತ್ತ್ವನಿಗೆ ಕೊಟ್ಟ ಧನ ಕೋಟಯಷ್ಟಾ ಯಿತು. ರಾಜನು

ಲೆ ಮಣಿಕಂಠೆ

ಕೂಡ ಧನದ ಮಳೆಗರೆಯುವಂತೆ ಅವನಿಗೆ ಬಹುವಾದ ಧನವನ್ನೂ ಮಹತ್ತಾದ ಯಶಸ್ಸನ್ನೂ ಕೊಟ್ಟಿನು.

ಹೀಗೆ ಬೋಧಿಸತ್ತ್ವನು ರಾಜನಿಂದ ಸತ್ಕಾರವನ್ನೂ ಗೌರವ ವನ್ನೂ ಪಡೆದು ಅಲ್ಲಿ ವಾಸಿಸುತ್ತಿ ರಲು, “ಅಸೆದೃಶಕುಮಾರನು ವಾರಾಣಸಿ ಯಲ್ಲಿ ಇಲ್ಲ” ಎಂದು ಏಳು ಜನ ರಾಜರು ಬಂದು, ವಾರಾಣಸಿಯನ್ನು ಬಳಸಿ, ರಾಜ್ಯ ಕೊಡು. ಇಲ್ಲವೆ, ಯುದ್ಧ ಮಾಡು” ಎಂದು ರಾಜನಿಗೆ ಓಲೆ ಕಳಿಸಿದರು.

ರಾಜನು ಮೆರಣಭಯಭೀತನಾಗಿ, ನನ್ನ ಅಣ್ಣನು ಎಲ್ಲಿ ವಾಸ ವಾಗಿರುವನು?” ಎಂದು ನೃಶ್ಲಿಸಿ, “ಒಬ್ಬ ಸಾಮಂತರಾಜನನ್ನು ಸೇವಿಸು ತ್ರಿರುವ”ನೆಂದು ಕೇಳಿ, Vy ನನ್ನ ಅಣ್ಣ ಬರದಿದ್ದರೆ, ಬದುಕು ವಂತಿಲ್ಲ. ಹೋಗಿ, ನನ್ನ ಜತ 08 ಅವನ ಕಾಲಿಗೆ ವಂದಿಸಿ, ಕ್ಷಮೆ ಪಡೆದು ee ಬನ್ಸಿರಿ” ಎಂದು ದೂತರನ್ನು ಕಳಿಸಿದನು.

ಅವರು ಹೋಗಿ, ನಡೆದುದನ್ನು ಬೋಧಿಸತ್ವ್ವನಿಗೆ ತಿಳಿಸಿದರು. ಬೋಧಿಸತ್ತ್ವನು ರಾಜನನ್ನು ಕು ವಾರಾಣಸಿಗೆ ಹಿಂದಿ ರುಗಿ ಚಡ ಹೆದರಬೇಡ'ವೆಂದು ರಾಜನನ್ನು ಸಂತೈಸಿ " ನಾನು, ಅಸದ್ಭೃಶಕುಮಾರ, ಬಂದಿದ್ದೇನೆ. ನಾನು ಒಂದು ಬಾಣ ಬಿಟ್ಟು ನಿಮ್ಮ ಎಲ್ಲರ ಜೀವ ತೆಗೆಯುತ್ತೇನೆ. ಬದುಕಬೇಕೆನ್ನುವವರು ಓಡಿಹೋಗಲಿ? ಎಂದು ಬಾಣದಲ್ಲಿ ಅಕ್ಷರ ಕೆತ್ತಿಸಿ ಅಟ್ಟಳಿಗೆಯಲ್ಲಿ ನಿಂತು, ಎಳು ಜನ ರಾಜರು ಊಟಮಾಡುತ್ತಿದ್ದ ಚಿನ್ನದ ತಟ್ಟಿಯ ಮಧ್ಯದಲ್ಲೇ ಬಾಣ ಬೀಳಿಸಿದನು. ಅವರು ಅಕ್ಷರಗಳನ್ನು ಕಂಡು, ಮರಣಭಯಭೀತರಾಗಿ ಓಡಿಹೋದರು.

ಹೀಗೆ ಮಹಾಸತ್ತ ಮನು, ಒಂದು ಸಣ್ಣ ನೊಣ ಕುಡಿಯುವಷ್ಟು ಕೂಡ ರಕ್ತ ಹೆಲ್ಲದೆ ಏಳು ಜನ ರಾಜರನ್ನೂ ಓಡಿಸಿ, ತಮ ನನ್ನು ಗಮನಿಸುತ್ತಾ ಕಾಮಗಳನ್ನು ತೊರೆದು, ಮನೆ ಬಿಟ್ಟುಹೋಗಿ ಯುಸಿ ಯಾಗಿ, ಅಭಿಜ್ಞೆಗಳನ್ನೂ ಸಮಾಪತ್ತಿಗಳನ್ನೂ ಉಂಟುಮಾಡಿಕೊಂಡು, ಬದುಕು ಮುಗಿದ ಮೇಲೆ ಬ್ರಹ್ಮಲೋಕಪರಾಯಣನಾದನು.

ಗೃಥ್ರ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲ್ಳು ಬೋಧಿಸತ್ತ್ವನು ಗೃಧ್ರ ಪರ್ವತದಲ್ಲಿ ಗೃಧ್ರದ ಹೊಟ್ಟಿ ಯಲ್ಲಿ ಜನ್ಮತಾಳಿ, ತಾಯಿತಂದೆಯನ್ನು ಪೋಷಿಸುತ್ತಿದ್ದನು.

ಆಗ ಒಮ್ಮೆ ಬಹಳ ಗಾಳಿ ಮಳೆ ಆಯಿತು. ಗೃಧ್ರಗಳು ಗಾಳಿ ಮಳೆಗಳನ್ನು ಸಹಿಸಲಾರದೆ ಶೀತಭಯದಿಂದ ವಾರಾಣಸಿಗೆ ಹೋಗಿ, ಕೋಟೆಯ ಬಳಿಯೂ ಅಗಳಿನ ಬಳಿಯೂ ಶೀತದಿಂದ ನಡುಗುತ್ತಾ ಕುಳಿತಿದ್ದವು.

ಆಗ ವಾರಾಣಸಿ ಶ್ರೇಷ್ಠಿಯು ನಗರದಿಂದ ಹೊರಟು ಸ್ನಾನಕ್ಕೆ ಹೋಗುತ್ತಾ, ಗೃಥಧ್ರ ಗಳು ಕೋಟಲೆಗೊಳ್ಳು ವುದನ್ನು ಕಂಡು, ಮಳೆ ಸೋರದ ಒಂದು ಕಡೆ ಅವುಗಳನ್ನು ಒಟ್ಟುಗೂಡಿಸಿ, ಬೆಂಕಿ ಮಾಡಿಸಿ, ಗೋಶ್ಮಶಾನಕ್ಕೆ ಕಳಿಸಿ ಗೋಮಾಂಸವನ್ನು ತರಿಸಿ, ಅವುಗಳಿಗೆ ಕೊಡಿಸಿ, ಕಾವಲಿರಿಸಿದನು.

ಗೃಧ)ಗಳು ಗಾಳಿ ಮಳೆ ನಿಂತಮೇಲೆ ಮೈ ತುಂಬಿಕೊಂಡು ಪರ್ವತಕ್ಕೆ ಹೋದವು. ಅಲ್ಲಿ ಒಟ್ಟುಗೂಡಿ "ವಾರಾಣಸಿ ಶ್ರೇಷ್ಠಿ, ನಮಗೆ ಉಪಕಾರ ಮಾಡಿದನು. ಯಾವ ಉಪಕಾರದಿಂದ ನಾವು ಪ್ರತ್ಯುಪಕಾರ ಮಾಡಬಹುದು ? ಒಳ್ಳೆಯದು. ಇಂದಿನಿಂದ ತೊಡಗಿ, ನಮಗೆ ದೊರಕಿದ ವಸ್ತ್ರಗಳನ್ನೂ ಆಭರಣಗಳನ್ನೂ ವಾರಾಣಸಿ ಶ್ರೇಷ್ಠಿಯ ಮನೆಯ ಬಯಲಂಗಳದಲ್ಲಿ ಬೀಳಿಸೋಣ ?' ಎಂದು ಆಲೋಚನೆ ಮಾಡಿದವು.

ಅಂದಿನಿಂದ ಗೃಧ ಗಳು, ಜನರು ವಸ್ತ್ರಾಭರಣಗಳನ್ನು ಬಿಸಿಲಿ ನಲ್ಲಿ ಒಣಗಿಸುತ್ತಾ ಎಚ್ಚರ ತಪ್ಪಿ ದುದನ್ನು ಕಂಡರೆ, ಗಿಡುಗವು ಮಾಂಸದ ತುಂಡನ್ನು ಹಿಡಿಯುವಂತೆ ಎರಗಿ ಹಿಡಿದು, ವಾರಾಣಸಿ ಶ್ರೇಷ್ಠಿಯ ಮನೆಯ ಬಯಲಂಗಳದಲ್ಲಿ ಬೀಳಿಸುವುವು. ಗೃಧ್ರಗಳು ಆಭರಣ ತರುವುದನ್ನು ತಿಳಿದು, ಅವನು ಅವುಗಳೆಲ್ಲವನ್ನೂ ಬೇರೆಯೇ ಇರಿಸಿದನು.

ಗೃಧ)ಗಳು ನಗರವನ್ನು ಲೂಟಿಮಾಡುತ್ತಿವೆ?' ಎಂದು ರಾಜ ನಿಗೆ ತಿಳಿಸಿದರು.

೧೦ ಮಣಿಕಂಠ

ರಾಜನು" ನೀವು ಒಂದು ಗೃಧ್ರವನ್ನು ಮಾತ್ರ ಹಿಡಿಯಿರಿ. ಎಲ್ಲವನ್ನೂ ತರಿಸುವೆನು?”' ಎಂದು ಅಲ್ಲಲ್ಲೇ ಪಾಶಗಳನ್ನೂ ಜಾಲಗಳನ್ನೂ ಒಡ್ಡಿಸಿದನು.

ತಾಯಿಯನ್ನು ಪೋಷಿಸುತ್ತಿದ್ದ ಗೃಧ್ರ ಒಂದು ಪಾಶದಲ್ಲಿ ಸಿಕ್ಕಿಬಿತ್ತು. ಅದನ್ನು ಹಿಡಿದು "" ರಾಜನಿಗೆ ತೋರಿಸೋಣ '' ಎಂದು ಜನರು ಒಯ್ಯುತ್ತಿದ್ದರು.

ವಾರಾಣಸಿಶ್ರೇಷ್ಠಿ ರಾಜನ ಸೇವೆಗೆ ಹೋಗುತ್ತಾ, ಜನರು ಗೃಧ್ರವನ್ನು ಹಿಡಿದುಕೊಂಡು ಹೋಗುವುದನ್ನು ಕಂಡು, "ಈ ಗೃಧ್ರವನ್ನು ಬಾಧಿಸಬೇಡಿ'' ಎಂದು ಅದರ ಜೊತೆಯಲ್ಲಿಯೇ ಹೋದನು.

ಗೃಧ್ರವನ್ನು ರಾಜನಿಗೆ ಕಾಣಿಸಿದರು.

ಆಗ ರಾಜನು ನೀನು ನಗರದಲ್ಲಿ ಲೂಟಓಮಾಡಿ ವಸ್ತಾದಿ ಗಳನ್ನು ತೆಗೆದುಕೊಂಡು ಹೋಗುವೆಯಾ? ಎಂದು ಅದನ್ನು ಕೇಳಿದನು.

« ಹೌದು, ಮಹಾರಾಜ. '

" ಯಾರಿಗೆ ಕೊಟ್ಟಿರುವೆ.

« ವಾರಾಣಸಿ ಶ್ರೇಷ್ಮಿಗೆ. ?'

(( ಏಕೆ ೨೨

« ನಮ್ಮನ್ನು ಅವನು ಬದುಕಿಸಿದನು. ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು ತಕ್ಕುದು. ಆದ್ದರಿಂದ ಕೊಟ್ಟೆವು.”

ಆಗ ರಾಜನು ಗೃಧ್ರಗಳು ನೂರು ಯೋಜನದ ಮೇಲೆ ನಿಂತು ಕೂಡ ಹೆಣವನ್ನು ಕಾಣುವುವು. ನಿನಗಾಗಿ ಒಡ್ಡಿದ ಪಾಶಗಳು ಬಳಿಯಿದ್ದರೂ ನೀನೇಕೆ ಅವುಗಳನ್ನು ಕಾಣಲಿಲ್ಲ?” ಎಂದನು.

ಗೃಥ್ಪೃ ಅವನು ನುಡಿದುದನ್ನು ಕೇಳಿ ವಿನಾಶವಾಗುವಾಗ, ಬದುಕು ಮುಗಿಯುವಾಗ, ಜಾಲವಾಗಲಿ ಪಾಶವಾಗಲಿ ಬಳಿಯಿದ್ದರೂ ಕಾಣಿಸುವುದಿಲ್ಲ” ಎಂದಿತು.

ಗೃಧ) ಡಿ

ರಾಜನು ಗೃಧ್ರದ ಮಾತನ್ನು ಕೇಳಿ, ಶ್ರೇಷ್ಠಿಯನ್ನು ಕುರಿತು, « ಮಹಾಶ್ರೇಸ್ಠಿ, ಗೃಧ್ರವು ನಿನ್ನ ಮನೆಗೆ ವಸ್ತ್ರಾದಿಗಳನ್ನು ತಂದುದು ಸತ್ಯವೇ ಎಂದು ಕೇಳಿದನು.

« ಸತ್ಯ, ದೇವ.”

( ಅವ್ರ ಎಲ್ಲಿ

« ದೇವ ಎಲ್ಲವನ್ನೂ ಬೇರೆಯೇ ಇರಿಸಿರುವೆನು. ಯಾವುದು ಯಾರದೋ ಅನರಿಗೆ ಅದನ್ನು ಕೊಡುತ್ತೇನೆ. ಗೃಧ್ರವನ್ನು ಬಿಟ್ಟು ಬಿಡಿ'' ಎಂದು ಗೃಧ್ರವನ್ನು ಬಿಡಿಸಿ ಮಹಾಶ್ರೇಷ್ಠಿ ಅವರವರ ಸ್ವತ್ತು ಗಳನ್ನು ಅವರವರಿಗೆ ಕೊಡಿಸಿದನು.

ತಿಲಮುಷ್ಟಿ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲ್ಕು ಅವನ ಮಗನು ಬ್ರಹ್ಮದತ್ತಕುಮಾರನೆಂದು ಹೆಸರಾದನು.

ಹಿಂದಿನ ರಾಜರು «ಇದರಿಂದ ಇಡವರ ಮಾನದರ್ಪಗಳು ಅಡಗುವುವು. ಇದರಿಂದ ಇವರು ಶೀತೋಷ್ಣ ಗಳನ್ನು ಸಹಿಸುವರು. ಇದರಿಂದ ಇವರು ಲೋಕದ ನಡೆವಳಿಯನ್ನು ತಿಳಿಯುವರು” ಎಂದ್ದು ತಮ್ಮ ನಗರದಲ್ಲಿಯೇ ಲೋಕನಿಖ್ಯಾತನಾದ ಆಚಾರ್ಯನಿದ್ದರೂ, ತಮ್ಮ ಮಕ್ಕಳನ್ನು ವಿದ್ಯೆಕಲಿಯುವುದಕ್ಕಾಗಿ ರಾಷ್ಟ್ರದಿಂದ ಆಚೆ ದೂರ ಕಳಿಸುತ್ತಿದ್ದರು.

ರಾಜನು ಕೂಡ ಹೆದಿನಾರು ವಯಸ್ಸಿಗೆ ಬಂದ ತನ್ನ ಮಗನನ್ನು ಕರೆಕಳಿಸಿ, ಒಂದೇ ತಲದ ಪಾದರಕ್ಷೆಯನ್ನೂ ಎಲೆಯ ಕೂಡೆಯನ್ನೂ ಸಾವಿರ ಕಾರ್ಷಾಷಣಗಳನ್ನೂ ಕೊಟ್ಟು, “ಅಪ್ಪಾ, ತಕ್ಷಶಿಲೆಗೆ ಹೋಗಿ, ವಿದ್ಯ ಕಲಿ ಎಂದು ಕಳಿಸಿದನು.

ಅವನು ಒಳ್ಳೆಯದೆಂದು ತಾಯಿತಂದೆಗೆ ವಂದಿಸಿ, ಹೊರಟು, ಕ್ರಮವಾಗಿ ತಕ್ಷತಿಲೆಯನ್ನು ಸೇರಿ, ಆಚಾರ್ಯನ ಮನೆಯನ್ನು ಕೇಳ್ಳಿ ಆಚಾರ್ಯನು ಶಿಷ್ಯರಿಗೆ ಓದಿಸಿಯಾದ ಮೇಲೆ ಎದ್ದು ಮನೆಬಾಗಿಲಲ್ಲಿ ತಿರುಗಾಡುತ್ತಿರುವಾಗ ಮನೆಗೆ ಹೋಗಿ, ಎಲ್ಲಿ ನಿಂತು ಆಚಾರ್ಯನನ್ನು ಕಂಡನೋ ಅಲ್ಲಿಯೇ ಪಾದರಕ್ಷೆಯನ್ನು ಕಳಚಿ, ಕೊಡೆಯನ್ನು ಕೆಳಗಿಳಿಸಿ ಆಚಾರ್ಯನಿಗೆ ವಂದಿಸಿ, ನಿಂತನು.

ಅವನು ಆಯಾಸಗೊಂಡಿದ್ದುದನ್ನು ತಿಳಿದ್ಕು ಆಚಾರ್ಯನು ಅವನನ್ನು ಬರಮಾಡಿಕೊಂಡನು. ಕುಮಾರನು ಊಟಿ ಉಂಡು ಕೊಂಚ ವಿಶ್ರಮಿಸಿಕೊಂಡು, ಆಚಾರ್ಯನ ಬಳಿ ಸೇರಿ, ವಂದಿಸಿ, ನಿಂತನು.

" ಎಲ್ಲಿಂದ ಬಂದೆ, ಅಪ್ಪ? ಎಂದು ಅವನು ಕೇಳಿದನು.

«4 ವಾರಾಣಸಿಯಿಂದ.

"ಯಾರ ಮಗ ನೀನು?”

ವಾರಾಣಸಿ ರಾಜನ ಮಗ.

ತಿಲಮುಸ್ಟಿ ೧೩

ಏತಕ್ಕಾಗಿ ಬಂದೆ?”

ವಿದ್ಯೆ ಕಲಿಯುವುದಕ್ಕಾಗಿ.

“ಆಚಾರ್ಯಭಾಗವನ್ನು ತಂದಿರುವೆಯೊ? ಅಥವಾ ಧರ್ಮಶಿಷ್ಯ ನಾಗಲು ಬಯಸುವೆಯೊ ?

"ನಾನು ಆಚಾರ್ಯಭಾಗ ತಂದಿರುನೆನು” ಎಂದು ಅವನು ಹೇಳಿ ಆಚಾರ್ಯನ ಪಾದಮೂಲದಲ್ಲಿ ಸಾವಿರದ ಚೀಲವನ್ನು ಇಟ್ಟು ವಂದಿಸಿದನು.

ಧರ್ಮಶಿಷ್ಯರಾದನರು ಹಗಲು ಆಚಾರ್ಯನ ಕೆಲಸ ಮಾಡಿ, ರಾತ್ರಿ ವಿದ್ಯೆ ಕಲಿಯುವರು. ಆಚಾರ್ಯಭಾಗ ಕೊಟ್ಟವರು ಮನೆಗೆ ಹಿರಿಯ ಮಕ್ಕಳಂತಾಗಿ ವಿದ್ಯೆಯನ್ನು ಮಾತ್ರ ಕಲಿಯುವರು. ಅದರಂತೆ ಆಚಾರ್ಯನು ಕುಮಾರನಿಗೆ ವಿದ್ಯೆ ಕಲಿಸಿದನು.

ಕುಮಾರನು ವಿದ್ಯೆ ಕಲಿಯುತ್ತಾ, ಒಂದು ದಿನ ಆಚಾರ್ಯ ನೊಡನೆ ಸ್ಪಾನಮಾಡಲು ಹೋದನು. ಆಗ ಒಬ್ಬ ಮುದುಕಿ ಎಳ್ಳ ನ್ನು ಬೆಳ್ಳಗೆ ಮಾಡಿ, ಹರಡಿ, ಕಾಯುತ್ತಾ ಕುಳಿತಿದ್ದಳು. ಕುಮಾರನು ಬಿಳಿಯ ಎಳ್ಳನ್ನು ಕಂಡು, ತಿನ್ನಲು ಆಸೆಪಟ್ಟು, ಒಂದು ಹಿಡಿ ಎಳ್ಳು ತೆಗೆದು ತಿಂದನು. ಮುದುಕಿ “ಇವನಿಗೆ ಹಸಿವಾಗಿರಬೇಕು” ಎಂದು ಏನೂ ಹೇಳದೆ ಸುಮ್ಮನಿದ್ದಳು.

ಅವನು ಮರುದಿವಸ ಅದೇ ವೇಳೆಯಲ್ಲಿ ಹಾಗೇ ಮಾಡಿದನು. ಅವಳೂ ಅವನಿಗೆ ಏನೂ ಹೇಳಲಿಲ್ಲ. ಅವನು ಮೂರನೆಯ ದಿನವೂ ಹಾಗೆಯೇ ಮಾಡಿದನು. ಆಗ ಮುದುಕಿ ಲೋಕನಿಖ್ಯಾತನಾದ ಆಚಾರ್ಯನು ತನ್ನ ಶಿಷ್ಯರಿಂದ ನನ್ನನ್ನು ಲೂಟಮಾಡಿಸುತ್ತಿದ್ದಾನೆ” ಎಂದು ತೋಳು ನೀಡಿ ಗೋಳಾಡಿದಳು.

ಆಚಾರ್ಯನು ಹಿಂದಿರುಗಿ ಏನಾಯಿತು, ಅಮ್ಮಾ” ಎಂದು ಕೇಳಿದನು.

ಸ್ವಾಮಿ, ನಿನ್ನ ಶಿಷ್ಯನು ನಾನು ಮಾಡಿದ ಬಿಳಿಯ ಎಳ್ಳಿ ನಲ್ಲಿ ಹೊತ್ತು ಒಂದು ಹಿಡಿ ತಿಂದ. ನಿನ್ನೆ ಒಂದು, ಮೊನ್ನೆ ಒಂದು. ಹೀಗೆ ತಿನ್ನುತ್ತಾ ನನ್ನ ಸ್ವತ್ತು ಎಲ್ಲವನ್ನೂ ನಾಶಮಾಡುವನು.

೧೪ ಮಣಿಕಂಠ

ಅಮ್ಮಾ, ಅಳಬೇಡ. ನಿನಗೆ ಬೆಲೆ ಕೊಡಿಸುವೆನು. *

ಸ್ವಾಮಿ, ನನಗೆ ಬೆಲೆ ಬೇಕಾಗಿಲ್ಲ. ಕುಮಾರನು ಪುನಃ ಹಾಗೆ ಮಾಡದಂತೆ ಅವನಿಗೆ ಕಲಿಸಿರಿ.”

ಆಚಾರ್ಯನು ಹಾಗಾದರೆ, ನೋಡು, ಅಮ್ಮಾ” ಎಂದು ಇಬ್ಬರು ಹುಡುಗರಿಂದ ಕುಮಾರನನ್ನು ಎರಡು ಕ್ಸೆಗಳಲ್ಲೂ ಹಿಡಿಸಿ, ಬಿದಿರು ಸೀಳನ್ನು ಹಿಡಿದು, “ಪುನಃ ಹೀಗೆ ಮಾಡಬೇಡ” ಎಂದು ಮೂರು ಸಲ ಬೆನ್ನ ಮೇಲೆ ಹೊಡೆದನು.

ಕುಮಾರನು ಆಚಾರ್ಯನ ಮೇಲೆ ಕ್ರೋಧಗೊಂಡು, ಕೆಂಪು ಕಣ್ಣು ಮಾಡಿಕೊಂಡು, ಕಾಲಿನಿಂದ ತಲೆಯವರೆಗೂ ಅವನನ್ನು ದೃಷ್ಟಿಸಿದನು. ಅವನು ಕ್ರುದ್ಧನಾಗಿ ದೃಷ್ಟಿಸಿದುದು ಅವನಿಗೂ ತಿಳಿಯಿತು.

ಕುಮಾರನು ಮನಸ್ಸು ಕೊಟ್ಟು ವಿದ್ಯೆಯನ್ನು ಮುಗಿಸಿ, “ಇವನು ನನ್ನಿಂದ ಸಾಯಬೇಕು” ಎಂದು ಅವನು ಮಾಡಿದ ದ್ವೇಷವನ್ನು ಹೃದಯದಲ್ಲಿ ಇರಿಸಿ, ಹೊರಡುವಾಗ ಆಚಾರ್ಯನಿಗೆ ವಂದಿಸಿ, "ಆಚಾರ್ಯ, ನಾನು ವಾರಾಣಸಿ ರಾಜ್ಯವನ್ನು ಪಡೆದು, ನಿನ್ನ ಬಳಿಗೆ ಜನ ಕಳಿಸುವೆನು. ನೀನು ಆಗ ಬರಬೇಕು” ಎಂದು ಸ್ನೇಹವಿರುವಂತೆ ಮಾತನಾಡಿ, ಪ್ರತಿಜ್ಞೆಯನ್ನು ತೆಗೆದುಕೊಂಡು ಹೋದನು.

ಅವನು ವಾರಾಣಸಿಗೆ ಹೋಗಿ, ತಾಯಿತಂದೆಗೆ ವಂದಿಸಿ, ಕಲಿತು ದನ್ನು ತೋರಿಸಿದನು. ರಾಜನು "ಬದುಕಿರುವಾಗಲೇ ಮಗನನ್ನು ಕಂಡೆ. ಬದುಕಿರುವಾಗಲೇ ಅವನ ರಾಜ್ಯಶ್ರೀಯನ್ನೂ ಕಾಣುವೆನು” ಎಂದು ಮಗನನ್ನು ರಾಜ್ಯದಲ್ಲಿ ಪ್ರತಿಷ್ಠೆ ಮಾಡಿದನು.

ಅವನು ರಾಜ್ಯಶ್ರೀಯನ್ನು ಅನುಭವಿಸುತ್ತಾ, ಆಚಾರ್ಯರಿಂದ ಆದ ದೋಷವನ್ನು ಸ್ಮರಿಸಿ ಕೋಪಗೊಂಡು,“ಅವನನ್ನು ಸಾಯಿಸುವೆನು” ಎಂದು, ಕರೆಕಳಿಸುವುದಕ್ಕಾಗಿ ಆಚಾರ್ಯನ ಬಳಿಗೆ ದೂತನನ್ನು ಕಳಿಸಿದನು.

ಆಚಾರ್ಯನು ತರುಣಕಾಲದಲ್ಲಿ ಇವನನ್ನು ಒಪ್ಪಿಸುವುದು ನನಗೆ ಶಕ್ಯವಿಲ್ಲ” ಎಂದು ಹೋಗದೆಯೆ, ರಾಜನ ಮಧ್ಯಮವಯಸ್ಸಿನ ಕಾಲದಲ್ಲಿ ಈಗ ಇವನನ್ನು ನಾನು ಒಪ್ಪಿ ಸಬಲ್ಲೆ ಎಂದು ಹೋಗಿ

ತಿಲಮುಸ್ಟಿ ೧೫

ರಾಜದ್ವಾರದಲ್ಲಿ ನಿಂತು, ತಕ್ಷಶಿಲಾಚಾರ್ಯನು ಬಂದನು” ಎಂದು ಹೇಳಿಕಳಿಸಿದನು.

ರಾಜನು ಸಂತುಷ್ಟನಾಗಿ, ಬ್ರಾಹ್ಮಣನನ್ನು ಕರೆಕಳುಜ, ಅವನು ತನ್ನ ಬಳಿ ಬರುವುದನ್ನು ಕಂಡ ಮಾತ್ರಕ್ಕೇ ಕೋಪಗೊಂಡು, ಕಣ್ಣು ಕೆಂಪು ಮಾಡಿಕೊಂಡು, ಅಮಾತ್ಯರನ್ನು ಕರೆದು ನನ್ನ ಆಚಾರ್ಯನು ಹೊಡೆದ ಸ್ಥಳ ಹೊತ್ತಿಗೂ ನೋಯುತ್ತಿದೆ. ಆಚಾರ್ಯನು ಹಣೆಯಲ್ಲಿ ಮೃತ್ಯುವನ್ನು ಕೊಂಡು ಸಾಯುವೆನೆಂದು ಬಂದಿರುವನು. ಹೊತ್ತು ಇವನಿಗೆ ಉಳಿಗಾಲವಿಲ್ಲ” ಎಂದು ಹೇಳುತ್ತಾ, ಒಂದು ಹಿಡಿ ಎಳ್ಳಿ ಗಾಗಿ ನೀನು ನನ್ನ ತೋಳು ಹಿಡಿದು ಮೂರುಬಾರಿ ಹೊಡೆದು ಇಲ್ಲಿಗೆ ಬರಲು ನಿನಗೆ ಬದುಕು ಬೇಡವಾಗಿರಬೇಕ್ಕು, ಬ್ರಾಹ್ಮಣ” ಎಂದನು.

ಹೀಗೆ ಅವನನ್ನು ಮರಣದಿಂದ ಬೆದರಿಸುತ್ತಾ ಅವನು ಹೇಳಿದನು. ಆಚಾರ್ಯನು ಅದನ್ನು ಕೇಳಿ, ಅನಾರ್ಯವಾದ ಕೆಲಸ ಮಾಡುವ ವರನ್ನು ಆರ್ಯರು ಹೊಡೆದು ತಡೆದರೆ, ಅದು ಕಲಿಸುವುದಕ್ಕಾಗಿಯಲ್ಲದೆ

ವೈರದಿಂದಲ್ಲ. ಪಂಡಿತರು ಹೀಗೆಂದು ತಿಳಿದಿರುವರು” ಎಂದನು.

| ಆದ್ದರಿಂದ, ಮಹಾರಾಜ, ನೀನೂ ಇದನ್ನು ಗಮನಿಸು. ಇಂತಹ ಕಡೆ ವೈರ ಮಾಡುವುದು ಯೋಗ್ಯವಲ್ಲ. ಮಹಾರಾಜ, ನಾನು ನಿನಗೆ ಇದನ್ನು ಕಲಿಸದೆ ಹೋಗಿದ್ದರೆ, ಬರುಬರುತ್ತಾ ಕಜ್ಜಾಯ ಮೊದಲಾದ ಸಿಹಿ ತಿನಿಸುಗಳನ್ನೂ ಫಲಾಫಲಗಳನ್ನೂ ಕದಿಯುತ್ತಾ ಕಳ್ಳ ಕಲಸದಲ್ಲಿ ಮುಳುಗುತ್ತಿದ್ದೆ. ಕ್ರಮವಾಗಿ ಕನ್ನಕೊರೆದು, ದಾರಿಕಾಯ್ದು, ಗ್ರಾಮಗಳಲ್ಲಿ ಕೊಲೆಮಾಡುತ್ತಿದ್ದೆ. ರಾಜಾನರಾಧಿಕನಾದ ಕಳ್ಳನೆಂದು ನಿನ್ನನ್ನು ಒಡವೆಯೊಡನೆ ಹಿಡಿದುಕೊಂಡು ರಾಜನಿಗೆ ತಂದು ತೋರಿಸುತ್ತಿದ್ದರು. "ಹೋಗಿ, ಇವನ ದೋಷಕ್ಕೆ ತಕ್ಕ ದಂಡವನ್ನು ವಿಧಿಸಿರಿ' ಎಂಬ ರಾಜ ದಂಡದ ಭಯ ನಿನಗೆ ಪ್ರಾಸ್ಮನಾಗುತ್ತಿತ್ತು. ಇಂತಹ ಸಂಪತ್ತು ನಿನಗೆ ಎಲ್ಲಿ ಉಂಟಾಗುತ್ತಿತ್ತು? ನನ್ನಿಂದ ಅಲ್ಲವೇ ಐಶ್ವರ್ಯ ನಿನಗೆ ಲಭಿಸಿದುದು?

೧೬ ಮಣಿಕಂಠ

ಆಚಾರ್ಯನು ಹೀಗೆ ರಾಜನಿಗೆ ತಿಳಿವಳಿಕೆ ಕೊಟ್ಟನು. ಸುತ್ತಲೂ ನಿಂತ ಅಮಾತ್ಯರು ಅವನು ಹೇಳಿದುದನ್ನು ಕೇಳಿ, “ಸತ್ಯ, ದೇವ. ಐಶ್ವರ್ಯನೆಲ್ಲಾ ಆಚಾರ್ಯನದೇ” ಎಂದರು.

ಅದೇ ಕ್ಷಣದಲ್ಲಿಯೇ ರಾಜನು ಆಚಾರ್ಯನ ಗುಣವನ್ನು ಕಂಡು ಕೊಂಡು, ಆಚಾರ್ಯ, ಐಶ್ವರ್ಯವನ್ನೆಲ್ಲಾ ನಿನಗೆ ಕೊಡುವೆನು. ರಾಜ್ಯವನ್ನು ಒಪ್ಪಿಸಿಕೊ » ಎಂದನು.

ಆಚಾರ್ಯನು “ನನಗೆ ರಾಜ್ಯ ಬೇಕಾಗಿಲ್ಲ ಮಹಾರಾಜ” ಎಂದು ಅದನ್ನು ಒಲ್ಲದೆ ಹೋದನು.

ರಾಜನು ತಕ್ರಶಿಲೆಗೆ ಜನರನ್ನು ಕಳಿಸಿ ಆಚಾರ್ಯನ ಹೆಂಡತಿ ಮಕ್ಕಳನ್ನು ಕರೆತರಿಸಿ, ಅವರಿಗೆ ಮಹಾ ಐಶ್ವರ್ಯವನ್ನು ಕೊಟ್ಟು, ಆಚಾರ್ಯನನ್ನೇ ಪುರೋಹಿತನನ್ನಾಗಿ ಮಾಡಿ, ತಂದೆಯ ಸ್ಥಾನದಲ್ಲಿ ಇರಿಸಿ, ಅವನ ಬುದ್ಧಿ ವಾದದಂತೆ ನಡೆದು, ದಾನಾದಿ ಪುಣ್ಯಗಳನ್ನು ಮಾಡಿ ಸ್ವರ್ಗಪರಾಯಣನಾದನು.

ಕಾಮ ನೀತ

ಹಂದೆ ಒಬ್ಬ ರಾಜನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಹಿರಿಯವನು ಹೋಗಿ, ವಾರಾಣಸಿಗೆ ರಾಜನಾದನು; ಕರಿಯವನು ಉಪರಾಜನಾದನು. ಅವರಲ್ಲಿ ರಾಜನಾದ ಹಿರಿಯನಿಗೆ ಅತಿ ಆಸೆ. ಎಷ್ಟು ವಸ್ತುಗಳಾದರೂ ಸಾಲದು, ಏನೇನು ಸುಖಪಟ್ಟಿರೂ ಸಾಲದು. ಅವನಿಗೆ

ತುಂಬಾ ಅತೃಪ್ತಿ. ಎಷ್ಟು ಐಶ್ವರ್ಯವಿದ್ದರೂ ಇನ್ನೂ ಬೇಕು.

ಆಗ ಬೋಧಿಸತ್ತ್ವನು ದೇವರಾಜನಾದ ಶಕ್ರನಾಗಿದ್ದನು. ಅವನು ಜಂಬೂದ್ವೀಪವನ್ನು ಅವಲೋಕಿಸುತ್ತಾ, ರಾಜನು ವಸ್ತುಗಳಿಗೂ ವಿಷಯಗಳಿಗೂ ಆಸೆಪಡುತ್ತಾ ಅತ್ಸಪ್ತಿಯಿಂದ ಇದ್ದುದನ್ನು ತಿಳಿದು ರಾಜನನ್ನು ನಿಗ್ರಹಿಸಿ, ಇವನು ಲಜ್ಜೆ ಪಡುವಂತೆ ಮಾಡುವೆನು? ಎಂದು ಬ್ರಾಹ್ಮಣ ಯುವಕನಂತೆ ಬಂದು, ರಾಜನನ್ನು ಕಂಡನು.

ರಾಜನು “ಏನು ಬಂದೆ ಅಯ್ಯಾ?” ಎಂದನು.

ಮಹಾರಾಜ, ಕ್ಷೇಮವೂ ಸುಭಿಕ್ಷವೂ ಆದ ಮೂರು ನಗರ ಗಳನ್ನು ನೋಡಿರುವೆನು. ಆನೆ, ಕುದುರೆ, ರಥ, ಪದಾತಿಗಳು ಅಲ್ಲಿ ಹೇರಳವಾಗಿವೆ. ಹಿರಣ್ಯ ಮತ್ತು ಸುವರ್ಣಗಳ ಆಭರಣಗಳು ಅಲ್ಲಿ ತುಂಬಿವೆ. ಸಣ್ಣಸೇನೆಯಿಂದ ಕೂಡ ಅವುಗಳನ್ನು ಹಿಡಿಯಲು ಸಾಧ್ಯ. ನಾನು ಅವುಗಳನ್ನು ನಿನಗೆ ಹಿಡಿದುಕೊಡಲು ಬಂದೆ.”

“ಯಾವಾಗ ಹೋಗೋಣ, ಅಯ್ಯಾ?”

“ಮಾಳ, ಮಹಾರಾಜ.”

“ಹಾಗಾದರೆ, ಹೋಗು. ಬೆಳಗಾದೊಡನೆ ಬರಬಹುದು.”

“ಒಳ್ಳೆಯದು, ಮಹಾರಾಜ. ಬೇಗ ಸೈನ್ಯವನ್ನು ಸಿದ್ಧಗೊಳಿಸು? ಎಂದು ಹೇಳಿ, ಶಕ್ರನು ಸ್ವಸ್ಥಾನಕ್ಕೆ ಹೋದನು.

ರಾಜನು ಮಾರನೆಯ ದಿವಸ ಡಂಗುರ ಹೊಯಿಸಿ, ಸೈನ್ಯವನ್ನು

ಸಿದ್ಧಮಾಡಿ, ಅಮಾತ್ಯ ನ್ನು ಕರೆಕಳುಬ್ಕ ನಿನ್ನೆ ಒಬ್ಬ ಬ್ರಾಹ್ಮಣ

ಹುಡುಗನು "ಉತ್ತರಪಾಂಚಾಲ, ಇಂದ್ರಪ್ರಸ್ಥ, ಕೇಕಕ ಎಂಬ ಮೂರು ವಿ

ಗಿ ಮಣಿಕಂಠ

ನಗರಗಳ ರಾಜ್ಯವನ್ನು ಹಿಡಿದುಕೊಡುನೆನು? ಎಂದು ಹೇಳಿದನು. ಹುಡುಗನನ್ನು ಕರೆದುಕೊಂಡು ಮೂರು ನಗರಗಳ ರಾಜ್ಯವನ್ನು ಹಿಡಿ ಯೋಣ. ಬೇಗ ಅವನನ್ನು ಕರೆಕಳಿಸಿರಿ? ಎಂದನು.

ದೇವ, ಅವನಿಗೆ ಇರಲು ಮನೆ ಎಲ್ಲಿ ಕೊಡಲಾಯಿತು?”

" ಅವನಿಗೆ ಇರಲು ಮನೆ ನಾನು ಕೊಡಿಸಲಿಲ್ಲ.”

ಹಾಗಾದರೆ, ತಂಗುವ ಮನೆಯ ವೆಚ್ಚಕ್ಕೆ ಕೊಟ್ಟಿ ತೇನು

ಅದನ್ನೂ ಕೊಡಲಿಲ್ಲ.”

ಹಾಗಾದರೆ ಅವನನ್ನು ಎಲ್ಲಿ ನೋಡೋಣ?”

ನಗರದ ಬೀದಿಗಳಲ್ಲಿ ಅವನನ್ನು ಹುಡುಕಿರಿ.”

ಅವರು ಹುಡುಕಿ ಕಾಣದೆ, ಕಾಣಲಿಲ್ಲ ಮಹಾರಾಜ” ನಂದರು.

ರಾಜನು ಅವನನ್ನು ಕಾಣದುದರಿಂದ ಹೀಗೆ ಮಹತ್ತಾದ ಐಶ್ವರ್ಯ ಕಳೆದುಹೋಯಿತು ಎಂದು ಮಹಾಶೋಕವನ್ನನುಭವಿಸಿ ದನು. ಅವನ ಹೃದಯ ಬಿಸಿಯಾಯಿತು, ಎದೆಯೊಳಗಿನ ರಕ್ತ ಕೆರಳಿತು,

ರಕ್ತಭೇದಿ ತಲೆದೋರಿತು. ವೈದ್ಯರಿಗೆ ಚಿಕಿತ್ಸೆ ಮಾಡಲು ಕೈ ಲಾಗಲಿಲ್ಲ.

ಮೂರು ನಾಲ್ಕು ಹೆಗಲಾದ ಮೇಲೆ ಶಕ್ರನು ಧ್ಯಾನಮಾಡುತ್ತಾ ಅವನ ಅಸ ಸ್ವಸ್ಥ ತೆಯನ್ನು ತಿಳಿದು “ಇವನಿಗೆ ಚಿಕೆತ್ಸೆ ಮಾಡುವೆನು ಎಂದು ಬ್ರಾಹ್ಮಣಯುವಕನಂತೆ ಬಂದು ಬಾಗಿಲಲ್ಲಿ ನಿಂತು ವೈದ್ಯ ನಾದ ಬ್ರಾಹ್ಮಣನು ನಿನಗೆ ಚಿಕಿತ್ಸೆ ಮಾಡುವುದಕ್ಕಾ ಗಿ ಬಂದಿರುವನು ? ಎಂದು ಹೈಳಿಳಳಿಸಿದನು.

ರಾಜನು ಅದನ್ನು ಕೇಳಿ "ಮಹಾ ಮಹಾ ರಾಜವೈದ್ಯರು ನನಗೆ ಚಿಕಿತ್ಸೆ ಮಾಡಲಾರದೆಹೋದರು. ಅವನ ವೆಚ್ಚಕ್ಕೆ ಏನಾದರೂ ಕೊಟ್ಟು ಕಳಿಸಿರಿ” ಎಂದನು.

ಶಕ್ರನು ಅದನ್ನು ಕೇಳಿ " ನನಗೆ ತಂಗುವ ಮನೆಯ ವೆಚ್ಚ ಕ್ರೈ ಬೇಕಾಗಿಲ್ಲ. ಪೂ ವೈದ್ಯರ ಲಾಭವನ್ನೂ ತೆಗೆದುಕೊಳ್ಳು ವುದಿಲ್ಲ. ಇವನಿಗೆ ಚಿಕಿತ್ಸೆಮಾಡುತ್ತೇನೆ. ರಾಜನು ನನ್ನ ನ್ನ್ನ ನೋಡಲಿ ಎಂದು ಹೇಳಿದನು.

ಕಾಮ ನೀತ ೧೯

ರಾಜನು ಅದನ್ನು ಕೇಳಿ, ಹಾಗಾದರೆ, ಬರಲಿ” ಎಂದನು.

ಶಕ್ರನು ಒಳಕ್ಕೆ ಬಂದು, ಜಯವಾಗಲೆಂದು ಹೇಳಿ, ಒಂದು ಕಡೆ ನಿಂತನು.

ರಾಜನು ನೀನು ನನಗೆ ಚಿಕಿತ್ಸೆ ಮಾಡುನೆಯ?” ಎಂದನು.

" ಹೌದು, ದೇವ.”

ಹಾಗಾದರೆ, ಚಿಕಿತ್ಸೆ ಮಾಡು.”

4 ಒಳ್ಳೆಯದು, ಮಹಾರಾಜ. ವ್ಯಾಧಿಯ ಲಕ್ಷಣಗಳನ್ನು ನನಗೆ ಹೇಳು. ಇದು ಏನು ಕಾರಣದಿಂದ ಉಂಟಾಯಿತು? ಏನಾದರೂ ತಿಂದು, ಕುಡಿದು, ಹೀಗಾಯಿತೆ? ಅಥವಾ ಕಂಡು, ಕೇಳಿ, ಹೀಗಾಯಿತೆ?”

ಅಪ್ಪಾ, ಏನೋ ಕೇಳಿದುದರಿಂದ ನನಗೆ ವ್ಯಾಧಿ ಉಂಟಾ ಯಿತು.?

ನೀನು ಏನು ಕೇಳಿದೆ ??

“ಅಪ್ಪಾ, ಒಬ್ಬ ಯುವಕನು ಬಂದು, " ಮೂರು ನಗರಗಳ ರಾಜ್ಯ ವನ್ನು ನಿನಗೆ ಹಿಡಿದುಕೊಡುನೆನು? ಎಂದು ನನಗೆ ಹೇಳಿದನು. ನಾನು ಅವನಿಗೆ ತಂಗಲು ಸ್ಥಳವನ್ನಾಗಲಿ, ತಂಗುವ ಸ್ಥಳಕ್ಕಾ ಗಿವೆಚ ತವನ್ನಾಗಲಿ ಕೊಡಿಸಲಿಲ್ಲ. ಅನನು ನನ್ನ ಮೇಲೆ ಕೋಪಗೊಂಡು ಇನೊ ಬ್ಬ ರಾಜನ ಬಳಿ ಹೋಗಿರಬೇಕು. ಅದರಿಂದ, " ಹೀಗೆ ಮಹೈಶ್ಚರ್ಯವನ್ನು ಕಳೆದುಕೊಂಡೆನು? ಎಂದು ನಾನು ಚಿಂತಿಸಿದುದರಿಂದ್ರ ವ್ಯಾಧಿ ಉಂಟಾಯಿತು. ಹೀಗೆ ಕಾಮದಿಂದ ಕೂಡಿದ ಚಿತ್ತ ಕಾರಣವಾಗಿ ನನಗೆ ಉಂಟಾಗಿರುವ ವ್ಯಾಧಿಗೆ ನಿನ್ನ ಕೃ ಲಾದರೆ ಚಿಕಿತ್ಸೆಮಾಡು. ಬ್ರಾಹ್ಮಣ, ನಾನು ಪಾಂಚಾಲ, ಕುರು, ಕೇಕಕ ಎಂಬ ಮೂರು ನಗರ ಗಳನ್ನು ಆಶಿಸುತ್ತೇನೆ. ಅದೂ ಅಲ್ಲದೆ, ಹೀಗೆ ಕಾಮದಿಂದ ನಡಸಲ್ಪಟ್ಟ ನನಗೆ ನೀನು ಚಿಕಿತ್ಸೆ ಮಾಡಬೇಕೆಂದೂ ಆಶಿಸುತ್ತೇನೆ.

ಆಗ ಶಕ್ರನು ಅವನನ್ನು ಕುರಿತು, ಮಹಾರಾಜ, ನಿನಗೆ ಬೇರು ಗಳ ಔಷಧದಿಂದ ಚಿಕಿತ್ಸೆಯಾಗುವುದಿಲ್ಲ. ಜ್ಞಾನದ ಔಷಧದಿಂದಲೇ ಚಿಕಿತ್ಸೆಯಾಗತಕ್ಕುದು » ಎಂದು ಹೇಳಿ, ಕೆಲವರು ಕಾಳಸರ್ಪ ಕಡಿದ ವರಿಗೆ ಚಿಕಿತ್ಸೆ ಮಾಡುವರು. ಯಕ್ಷರಿಂದ ಗಾಯಗೊಂಡವರಿಗೆ ಕೆಲವರು

೨೦ ಮಣಿಕಂಠೆ

ಚಿಕಿತ್ಸೆ ಮಾಡುವರು. ಕಾಮದಿಂದ ನಡಸಲ್ಪಟ್ಟವರಿಗೆ ಯಾರೂ ಚಿಕಿತ್ಸೆ ಮಾಡಲಾರರು. ಸದ್ಭರ್ಮವನ್ನು ಮಾರಿದವನಿಗೆ ಚಿಕಿತ್ಸೆ ಎಲ್ಲಿ ಬಂತು?” ಎಂದನು.

ಹೀಗೆ ಮಹಾಸತ್ತ್ವನು ಅದಕ್ಕೆ ಕಾರಣವನ್ನು ಕಾಣಿಸಿಯಾದ ಮೇಲೆ ಮಹಾರಾಜ, ಮೂರು ರಾಜ್ಯಗಳು ನಿನಗೆ ಲಭಿಸಿದರೆ ನೀನು ನಾಲ್ಕು ನಗರಗಳಲ್ಲೂ ರಾಜ್ಯವಾಳುತ್ತಾ, ಒಂದೇ ಬಾರಿಗೆ ನಾಲ್ಕು ಜೊತೆ ಬಟ್ಟೆ ಗಳನ್ನು ಧರಿಸಬಲ್ಲೆಯ? ನಾಲ್ಕು ಚಿನ್ನದ ತಟ್ಟೆ ಗಳಲ್ಲಿ ಉಣಬಲ್ಲೆಯ? ನಾಲ್ಕು ಶ್ರೀಶಯನಗಳಲ್ಲಿ ಮಲಗಬಲ್ಲೆಯ? ಮಹಾರಾಜ್ಕ ಆಸೆಗೆ ವಶನಾಗುವುದು ತಕ್ಕುದಲ್ಲ. ಆಸೆಯೆಂಬುದೇ ವಿಪತ್ತಿಗೆ ಮೂಲ. ಅದನ್ನು ವೃದ್ಧಿಗೊಳಿಸಿದರೆ, ವೃದ್ಧಿ ಗೊಳಿಸುವವರು ನಾನಾತೆರದ ನರಕಗಳಲ್ಲಿ ಬಿದ್ದು ದುಃಖಪಡುವರು” ಎಂದು ರಾಜನನ್ನು ನರಕಭಯದಿಂದ ಗದರಿಸಿ ಮಹಾಸತ್ತ್ವ್ವನು ಅವನಿಗೆ ಧರ್ಮವನ್ನು ಕಾಣಿಸಿದನು.

ರಾಜನು ಅನನ ಧರ್ಮವನ್ನು ಕೇಳಿ ಶೋಕ ಹೋದವನಾಗಿ, ಆಗಲೇ ವ್ಯಾಧಿಯಿಲ್ಲದವನಾದನು. ಶಕ್ರನೂ ಅವನಿಗೆ ಉಪದೇಶ ಕೊಟ್ಟು, ಶೀಲಗಳಲ್ಲಿ ಅವನನ್ನು ಪ್ರತಿಸ್ಥಾಪಿಸಿ, ದೇವಲೋಕಕ್ಕೆ ಹೋದನು. ರಾಜನೂ ಅಂದಿನಿಂದ ದಾನಾದಿ ಪುಣ್ಯಗಳನ್ನು ಮಾಡಿ, ತನ್ನ ಕರ್ಮಗಳಿಗೆ ತಕ್ಕಂತೆ ಹೋದನು.

ಸ್ಸ ಗಾಲ

ಹಿಂದೆ ವಾರಾಣಸಿಯಲ್ಲಿ ಬ್ರಹ ಒದತ್ತನು ರಾಜ್ಯವಾಳುತ್ತಿ ರಲು ಬೋಧಿಸತ್ತನು ಹಿಮವಂತಪ್ರ ನೀಶದ ಹೊಟ್ಟೆ ಯಲ್ಲಿ ಹುಟ್ಟಿ ದನು. ಅವನಿಗೆ ಆರು ಜನ ತಮ್ಮಂದಿರೂ ಒಬ್ಬ ಗೂ ಇದ್ದ ರು. ಅವರೆಲ್ಲರೂ ಕಾಂಚನಗುಹೆಯಲ್ಲಿ ವಾಸಿಸುತಿ ತ್ತಿದ್ದರು.

ಗುಹೆಗೆ ಸ್ವಲ್ಪ ದೊರದಲ್ಲಿ ರಜತಪರ್ವತದಲ್ಲಿ, ಒಂದು ಸ್ಫಟಕ ಗುಹೆಯಿತ್ತು. ಅಲ್ಲಿ ಒಂದು ಸೃಗಾಲ ವಾಸಿಸುತ್ತಿತ್ತು.

ಕೊಂಚ ಕಾಲವಾದ ಬಳಿಕ, ಸಿಂಹದ ತಾಯಿತಂದೆ ಕಾಲವಾದರು. ಅವು, ತಮ್ಮ ತಂಗಿಯಾದ ಸಿಂಹೆದಮರಿಯನ್ನು ಕಾಂಚನಗುಹೆಯಲ್ಲಿ ಇರಿಸಿ, ಆಹಾರಕ್ಕಾಗಿ ಹೊರಗೆ ಹೊರಟು, ಮಾಂಸವನ್ನು ತಂದು ಅದಕ್ಕೆ ಕೊಡುತ್ತಿದ್ದವು.

ಸೃಗಾಲವು ಸಿಂಹದ ಮರಿಯನ್ನು ಕಂಡು, ಅದಕ್ಕೆ ಮನಸ್ಸು ಸೋತಿತು. ಅದರ ತಾಯಿತಂದೆ ಬದುಕಿರುವಾಗ ಅದಕ್ಕೆ ಅವಕಾಶ ಸಿಕ್ಕಿ ರಲಿಲ್ಲ. ಈಗ ಏಳು ಸಿಂಹೆಗಳೂ ಆಹಾರಕ್ಕಾಗಿ ಹೋದ ಕಾಲದಲ್ಲಿ ಸ್ವ ನೃಟಕಗುಹೆಯಿಂದ ಇಳಿದು, ಕಾಂಚನಗುಹೆಯ ಬಾಗಿಲಿಗೆ ಬಂದು, ಬಃ ಮರಿ, ನನಗೂ ನಾಲ್ಕು ಕಾಲು, ನಿನಗೂ ನಾಲ್ಕು ಕಾಲು. ನೀನು ನನ್ನ ಹೆಂಡತಿಯಾಗು, ನಿನ್ನ ಗಂಡನಾಗುವೆನು. ನಾವಿಬ್ಬರೂ ಒಟ್ಟಾಗಿ ಸಂತೋಷದಿಂದ ವಾಸಿಸೋಣ. ನೀನು ಇಂದಿನಿಂದ ನನ್ನ ನ್ಸು ಅನುರಾಗದಿಂದ ಸಿ ್ರೀಕರಿಸು” ಎಂದು ಆಸೆಹುಟ್ಟಿ ಸುವಂತೆ ಗುಟ್ಟು ಮುತತ

ಅದು ಭರ ಮಾತನ್ನು ಕೇಳಿ, “ಚತುಷ್ಬಾದಗಳಲ್ಲೆಲ್ಲಾ ಸೃಗಾಲ ಹೀನವಾದದ್ದು, ತುಚ್ಛವಾದದ್ದು, ಚಂಡಾಲನಂತಹದು. ನಾನು ಉತ್ತಮ ರಾಜಕುಲಕ್ಕೆ ಸೇರಿದವಳು. ಇದು ನನ್ನೊಡನೆ ಅಸಭ್ಯವಾಗಿ ಇಂತಹ ಮಾತನಾಡುವುದು. ನಾನು ಇಂತಹ ಮಾತನ್ನು ಹೇಳಿಕೊಂಡು ಬದುಕೆ ಏನು ಮಾಡಲಿ ? ಮೂಗಿನಿಂದ ಉಸಿರಾಡು ವುದನ್ನು ತಡೆದು ಸಾಯುನೆನು” ಎಂದು ಚಿಂತಿಸಿತು. ಆಗ ಅದಕ್ಕೆ

೨೨ ಮಣಿಕಂಠ

“ನಾನು ಹೀಗೆ ಸಾಯುವುದು ತಕ್ಕುದಲ್ಲ. ಇಷ್ಟರಲ್ಲೇ ನನ್ನ ಅಣ್ಣಂದಿರು ಬರುವರು. ಅವರಿಗೆ ಹೇಳಿ ಸಾಯುನೆನು” ಎಂದೆನ್ಸಿ ಸಿತು.

ಸೃಗಾಲವೂ ಅದರೊಡನೆ ಉತ್ತರ ದೊರಕದೆ "ಈಗ ಇದು ನನ್ನೊಡನೆ ಸಂಭಾಷಿಸುವುದಿಲ್ಲ” ಎಂದು ಮನಸ್ಸು ಕುಗ್ಗಿ, ಸ್ಪಟಕಗುಹೆ ಯೊಳಕ್ಕೆ ಹೋಗಿ, ಮಲಗಿಕೊಂಡಿತು.

ಆಗ ಸಿಂಹೆದ ಮರಿಗಳೆಲ್ಲೊಂದು ಕೋಣ ಆನೆ ಮೊದಲಾದ ಯಾವುದನ್ನೋ ಕೊಂದ್ಕು ಮಾಂಸವನ್ನೂ ತಿಂದ್ಕು ತಂಗಿಗೂ ಭಾಗವನ್ನು ತಂದು, “ಅಮ್ಮಾ,ಮಾಂಸ ತಿನ್ನು? ಎಂದಿತು.

“ಅಣ್ಣ. ನಾನು ಮಾಂಸ ತಿನ್ನುವುದಿಲ್ಲ. ಸಾಯುತ್ತೇನೆ.”

“ಏಕೆ? ಕಾರಣವೇನು?”

ಅದು ನಡೆದುದನ್ನೆಲ್ಲಾ ಹೇಳಿತು.

“ಈಗ ಸ್ಪಗಾಲ ಎಲ್ಲಿ?”

ಅದ್ದು ಸ್ಫುಟಕ ಗುಹೆಯಲ್ಲಿ ಮಲಗಿದ್ದ ಸೃಗಾಲವನ್ನು "ಆಕಾಶ ದಲ್ಲಿ ಮಲಗಿದೆ? ಎಂದು ತಿಳಿದುಕೊಂಡು, ಅಣ್ಣ, ಕಾಣುವುದಿಲ್ಲವೆ?

ಅದು ರಜತಪರ್ವತದ ಬಳಿ ಆಕಾಶದಲ್ಲಿ ಮಲಗಿದೆ” ಎಂದಿತು.

ಸಿಂಹದ ಮರಿ ಅದು ಸ್ಫಟಕ ಗುಹೆಯಲ್ಲಿ ಮಲಗಿರುವುದನ್ನು ತಿಳಿಯದೆ, "ಆಕಾಶದಲ್ಲಿ ಮಲಗಿದೆ' ಯೆಂದು ಎಣಿಸಿಕೊಂಡು, "ಇದನ್ನು ಸಾಯಿಸುವೆನು' ಎಂದು ಸಿಂಹವೇಗದಿಂದ ನೆಗೆದು ಟಕಗುಹೆಯನ್ನು ಹೈದಯದಿಂದ ಹೊಡೆಯಿತು. ಅದರ ಹೃದಯ ಒಡೆದು, ಅದು ಅಲ್ಲಿಯೇ ಜೀವಬಿಟ್ಟು, ಪರ್ವತಪಾದದಲ್ಲಿ ಬಿದ್ದಿ ತು.

ಆಗ ಇನ್ನೊಂದು ಬಂತು. ಅದು ಅದಕ್ಕೂ ಹಾಗೆಯೇ ಹೇಳಿತು. ಅದು ಕೂಡ ಹಾಗೆಯೇ ಮಾಡಿ, ಜೀವ ಬಿಟ್ಟು, ಪರ್ವತ ಪಾದದಲ್ಲಿ

ಹೀಗೆ ಆರು ಜನ ಸಹೋದರರೂ ಸತ್ತ ಮೇಲೈ ಎಲ್ಲರಿಗೂ ಹಿಂದೆ ಬೋಧಿಸತ್ತ್ವನು ಬಂದನು. ಅವನಿಗೂ ಅದನ್ನು ತಿಳಿಸಿ, "ಈಗ

ಸ್ಫಗಾಲ ೨೩೩

ಅದು ಎಲ್ಲಿ? ' ಎಂದೆನ್ನಲು "ಅಮ ರಜತಪರ್ವತದ ನೆತ್ತಿಯಲ್ಲಿ ಆಕಾಶ ದಲ್ಲಿ ಮಲಗಿದೆ? ಎಂದಿತು.

ಬೋಧಿಸತ್ತನು “ಸ್ಕಗಾಲಗಳು ಆಕಾಶದಲ್ಲಿ ನಿಲ್ಲುವುನೆಂಬುದು ಇಲ್ಲ. ಸ್ಫಟಕಗುಹೆಯಲ್ಲಿ ಮಲಗಿದುದಾಗಿರಬೇಕು ಎಂದು ಚಿಂತಿಸಿ ದನು. ಅವನು ಪರ್ವತಪಾದಕ್ಕೆ ಇಳಿದು, ಆರು ಜನ ಸೋದರರು ಸತ್ತಿದ್ದುದನ್ನು ಕಂಡು, “ಇವರು ತಮ್ಮ ಅಜ್ಞಾನದಿಂದ ತಿಳಿವಳಿಕೆ ಯಿಲ್ಲದುದರಿಂದ್ಯ ಸ್ಫಟಿಕಗುಹೆಯಿರುವುದನ್ನು ತಿಳಿಯದೆ ಹೃದಯದಿಂದ ಹೊಡೆದು ಸತ್ತಿರಬೇಕು. ಸರಿಯಾಗಿ ಕಾಣದೆ ಅತಿತ್ವರೆಯಿಂದ ಮಾಡುವ ಕೆಲಸ ಹೀಗೆಯೇ ಆಗುವುದು” ಎಂದನು.

ಸಿಂಹವು ಹೀಗೆಂದು ಹೇಳಿ, “ನನ್ನ ತಮ್ಮಂದಿರು ಉಪಾಯ ತಿಳಿಯದವರು. ಸೃಗಾಲವನ್ನು ಹಡಿಯೋಣವೆಂದು ಅತಿ ವೇಗದಿಂದ ಹಾರಿ ತಾವೇ ಸತ್ತರು. ನಾನು ಹಾಗೆ ಮಾಡದೆ, ಸ್ಫಟಿಕಗುಹೆಯಲ್ಲಿ ಮಲಗಿರುವ ಸೃಗಾಲದಹೃದಯವೇ ಒಡೆಯುವಂತೆ ಮಾಡುವೆನು” ಎಂದು ಸೃ ಗಾಲವು ಹತ್ತಿ ಇಳಿಯುವ ಮಾರ್ಗವನ್ನು ಚೆನ್ನಾಗಿ ಗಮನಿಸಿ, ಅದಕ್ಕೆ ಎದುರಾಗಿ ನಿಂತು ಮೂರುಬಾರಿ ಸಿಂಹನಾದ ಮಾಡಿತು. ಭೂಮಿಯಿಂದ ಆಕಾಶದವರೆಗೂ ಒಂದೇ ಕೂಗಾಯಿತು. ಸ್ಫಟಕ ಗುಹೆಯಲ್ಲಿ ಮಲಗಿದ್ದಂತೆಯೇ ಸೃ ಗಾಲದ ಹೃದಯ ಹೆದರಿಕೆಯಿಂದ ಒಡೆದುಹೋಯಿತು. ಅದು ಅಲ್ಲಿಯೇ ಜೀವಬಿಟ್ಟಿ ತು.

ಉರಗ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮೆದತ್ತನು ರಾಜ್ಯವಾಳುತ್ತಿರಲು, ಒಂದಾನೊಂದು ಉತ್ಸವ ನಡೆಯಿತು. ಮಹಾ ಜನಸಂದಣಿ ಸೇರಿತು. ಬಹು ಮನುಷ್ಯರೂ ದೇವ ನಾಗ ಸುಪರ್ಣಾದಿಗಳೂ ಸಂದಣಿಯನ್ನು ನೋಡುವುದಕ್ಕೆ ಸೇರಿದರು.

ಅಲ್ಲಿ ಒಂದು ಕಡೆ ಒಂದು ನಾಗವೂ ಗರುಡವೂ ಸಂದಣಿಯನ್ನು ನೋಡುತ್ತಾ ಒಂದಾಗಿ ನಿಂತಿದ್ದವು. ನಾಗವು ಗರುಡನನ್ನು ಗರುಡ ನೆಂದು ತಿಳಿಯದೆ ಅದರ ಹೆಗಲ ಮೇಲೆ ಕ್ಸೆಯಿಟ್ಟತು. ಗರುಡನು " ನನ್ನ ಹೆಗಲ ಮೇಲೆ ಕೈಯಿಟ್ಟವರಾರು? » ಎಂದು ಹಿಂದಿರುಗಿ ನೋಡುತ್ತಾ, ಹಾವನ್ನು ಗುರುತಿಸಿತು. ಹಾವೂ ನೋಡುತ್ತಾ ಗರುಡ ನನ್ನು ಗುರುತುಹಿಡಿದು ಮರಣಭಯದಿಂದ ಹೆದರಿ ನಗರದಿಂದ ಹೊರಗೆ ಹೊರಟು ನದಿಯ ಮೇಲೆ ಓಡಿತು. ಗರುಡನೂ ಅದನ್ನು ಜಡಿಯುವೆ ನೆಂದು ಅದರ ಬೆನ್ನಟ್ಟಿ ತು.

ಸಮಯದಲ್ಲಿ ಬೋದಧಿಸತ್ತ್ವನು ತಾಪಸನನಗಿ ನದಿಯತೀರದ ಪರ್ಣಶಾಲೆಯಲ್ಲಿ ವಾಸಮಾಡುತ್ತಾ, ಬಿಸಿಲಿನ ಬೇಗೆಯನ್ನು ಅಡಗಿಸು ವುದಕ್ಕಾಗಿ ಸ್ನಾನದ ವಸ್ತ್ರವನ್ನು ತಳೆದು ನಾರುಮಡಿಯನ್ನು ಹೊರಗೆ ಇಟ್ಟು, ನದಿಗೆ ಇಳಿದು ಸ್ಪಾನಮಾಡುತ್ತಿದ್ದನು.

ಹಾವು "ಈ ತಾಪಸನನ್ನು ಆಶ್ರಯಿಸಿ ನಾನು ಬದುಕುವೆನು' ಎಂದು ತನ್ನ ಸ್ವರೂಪವನ್ನು ತೊರೆದು, ಮಣಿಯ ರೂಪವನ್ನು ರಚಿಸಿ ಕೊಂಡು ನಾರುಮಡಿಯ ಒಳಗೆ ಪ್ರವೇಶಿಸಿತು. ಗರುಡನು ಜೆನ್ನಟ್ಟುತ್ತಾ ಅದು ಅಲ್ಲಿ ಪ್ರವೇಶಿಸಿದುದನ್ನು ಕಂಡು, ಖುಷಿಯ ಮೇಲಿನ ಗೌರವ ಕ್ಕೋಸ್ಕರ ನಾರುಮಡಿಯನ್ನು ಹಿಡಿದುಕೊಳ್ಳದೆ, ಜೋಧಿಸತ್ತ್ವನನ್ನು ಕರೆದು “ಸ್ವಾಮಿ, ನನಗೆ ಹಸಿವು. ನಿಮ್ಮ ನಾರುಮಡಿಯನ್ನು ತೆಗೆದು ಕೊಳ್ಳಿರಿ. ಹಾವನ್ನು ತಿನ್ನುವೆನು” ಎಂದು ಅದನ್ನು ಸ್ಪಷ್ಟಪಡಿಸುವು ದಕ್ಕಾಗಿ “ದೊ ಡ್ಡಹಾವು ನಾರುಮಡಿಯ ಒಳಗೆ ಸೇರಿದೆ. ನನ್ನಿಂದ ತಪ್ಪಿಸಿಕೊಳ್ಳ ಬೇಕೆಂದು ಮಣಿಯ ರೂಪನ್ನು ತಾಳಿದೆ. ಬ್ರಾಹ್ಮಣನಾದ

ಉರಗ ೨೫

ನಿನ್ನ ಮೇಲಿನ ಗೌರವದಿಂದ್ಕ ಹಸಿವಾದರೂ ಇದನ್ನು ಹಿಡಿದು ತಿನ್ನಲಾರೆ” ಎಂದಿತು.

ಬೋಧಿಸತ್ತ್ವನು ನೀರಿನಲ್ಲಿ ನಿಂತೇ ಸುಪರ್ಣರಾಜನನ್ನು ಸ್ತುತಿಸಿ, “ನಿನ್ನನ್ನು ಬ್ರಹ್ಮನು ಕಾಪಾಡಲಿ. ನೀನು ಬಹುಕಾಲ ಬದುಕು. ನಿನಗೆ ದಿವ್ಯವಾದ ಆಹಾರ ಲಭಿಸಲಿ. ಬ್ರಾಹ್ಮಣನಾದ ನನ್ನ ಮೇಲಿನ ಗೌರವದಿಂದ, ಹಸಿವಾದರೂ ಇದನ್ನು ತಿನ್ನಬೇಡ” ಎಂದನು.

ಹೀಗೆ ಬೋಧಿಸತ್ತ್ವನು ನೀರಿನಲ್ಲಿ ನಿಂತೇ ಗರುಡನ ನಡತೆ ಯನ್ನು ಅನುಮೋದಿಸಿ, ಮೇಲೆ ಬಂದ್ಳು ನಾರುಮಡಿಯನ್ನು ಧರಿಸಿ, ಅವುಗಳೆರಡನ್ನೂ ಕರೆದುಕೊಂಡು ಆಶ್ರಮಪದಕ್ಕೆ ಹೋಗಿ, ಮೈತ್ರೀ ಭಾವನೆಯ ಮಹಿಮೆಯನ್ನು ಅವುಗಳಿಗೆ ತಿಳಿಸಿ, ಎರಡಕ್ಕೂ ಒಗ್ಗಟ್ಟು ಉಂಟುಮಾಡಿದನು. ಅವು ಅಂದಿನಿಂದ ಒಟ್ಟಾಗಿ ಸಂತೋಷ ಸುಖ ಗಳಿಂದ ವಾಸಿಸಿದುವು.

ಕೇಳಿಶೀಲ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲು, ಬೋಧಿಸತ್ತ್ವನು ದೇವರಾಜನಾದ ಶಕ್ರನಾದನು.

ಆಗ ಬ್ರಹ್ಮದತ್ತನಿಗೆ ವಯಸ್ಸಾಗಿ ಮುದಿಯಾದ ಆನೆಯನ್ನಾಗಲಿ ಕುದುರೆಯನ್ನಾಗಲಿ ಎತ್ತನ್ನಾ ಗಲಿ ಕಾಣುವುದೆಂದರೆ ಆಗುತ್ತಿರಲಿಲ್ಲ. ಅವನು ಕ್ರೀಡಾಶೀಲನಾಗಿ, ಅಂತಹದನ್ನು ಕಾಣುತ್ತಲೇ ಅದರ ಬೆನ್ನಟ್ಟಿ ಸುವನು. ಹಳೆಯ ಗಾಡಿಯನ್ನು ಕಂಡು ಅದನ್ನು ಮುರಿದು ಹಾಕಿಸುವನು. ಮುದಿಹೆಂಗಸರನ್ನು ಕಂಡು, ಹೇಳಿಕಳಿಸಿ, ಹೊಟ್ಟೆಯ ಮೇಲೆ ಏಟು ಹೊಡೆಸಿ, ಅವರನ್ನು ಬೀಳಿಸಿ, ಪುನಃ ಏಳಿಸಿ ಭಯ ಗೊಳಿಸುವನು. ವಯಸ್ಸಾದ ಗಂಡಸರನ್ನು ಕಂಡರೆ, ದೊಂಬರಂತೆ ನೆಲದ ಮೇಲೆ ಲಾಗಹಾಕುವುದೇ ಮೊದಲಾದ ಆಟವಾಡಿಸುವನು. ಕಾಣದೆ, "ಇಂತಹ ಮನೆಯಲ್ಲಿ ವಯಸ್ಸಾ ದವನು ಇದ್ದಾನೆ” ಎಂದು ಕೇಳಿದರೂ ಹೇಳಿಕಳಿಸಿ ಅವರನ್ನು ಆಡಿಸುವನು.

ಜನರು ಲಜ್ಜೆ ಗೊಂಡವರಾಗಿ ತಮ್ಮ ತಾಯಿತಂದೆಯರನ್ನು ರಾಷ್ಠದಿಂದಾಚೆ ಕಳಿಸುವರು. ತಾಯಿಗೂ ತಂದೆಗೂ ಸೇವೆ ಮಾಡುವ ಧರ್ಮ ಮುರಿದುಬಿತ್ತು. - ರಾಜನ ಸೇವಕರೂ ಕ್ರೀಡಾಶೀಲರೇ ಆದರು. ಸತ್ತಸತ್ತವರು ನಾಲ್ಕು ನರಕಗಳ ತುಂಬಾ ಆದರು. ದೇವತೆಗಳ ಪರಿಸೆ ಕಡಮೆಯಾಯಿತು.

ಶಕ್ರನು ಹೊಸ ದೇವಪುತ್ರರನ್ನು ಕಾಣದೆ, “ಇದೇನು ಕಾರಣ? ಎಂದು ಧ್ಯಾನಿಸುತ್ತಾ, ತಿಳಿದನು. “ಇವನನ್ನು ಅಡಗಿಸುವೆನು” ಎಂದು ಮುದುಕನಂತೆ ರೂಪತಾಳಿಕೊಂಡು, ಮುರಿದ ಗಾಡಿಯಲ್ಲಿ ಎರಡು ಮೊಸರಿನ ಮಡಕೆಗಳನ್ನು ಏರಿಸಿ, ಎರಡು ಮುದಿ ಎತ್ತುಗಳನ್ನು ಹೂಡಿಕೊಂಡು, ಒಂದು ಹೆಬ್ಬದ ದಿವಸ ಬಂದನು. ಬ್ರಹ್ಮದತ್ತನು ಅಲಂಕರಿಸಿದ ಆನೆಯ ಮೇಲೇರಿ, ಅಲಂಕರಿಸಿದ ನಗರವನ್ನು ಪ್ರದಕ್ಷಿಣ ಮಾಡುತ್ತಿರುವಾಗ, ಹರಕುಬಟ್ಟಿ ಹಾಕಿಕೊಂಡು ಮುರಿದ ಗಾಡಿ ಯನ್ನು ನಡಸುತ್ತಾ ರಾಜನ ಎದುರಿಗೆ ಬಂದನು.

ಜಕೇಳಿಶೀಲ ೨೭

ರಾಜನು ಹಳೆಯ ಗಾಡಿಯನ್ನು ಕಂಡು, "ಈ ಗಾಡಿಯನ್ನು ಅಜೆ ತೆಗೆಯಿರಿ” ಎಂದನು.

ಜನರು “ಎಲ್ಲಿ, ದೇವ? ಕಾಣುವುದಿಲ್ಲವಲ್ಲ?” ಎಂದರು.

ಶಕ್ರನು ತನ್ನ ಪ್ರಭಾವದಿಂದ ರಾಜನಿಗೆ ಮಾತ್ರ ಅದನ್ನು ಕಾಣಿಸಿದನು.

ಆಗ ಶಕ್ರನು ಅವನ ಸಮಾಪಕ್ಕೆ ಗಾಡಿಯನ್ನು ಓಡಿಸುತ್ತಾ, ರಾಜನ ತಲೆಯ ಮೇಲೆ ಒಂದು ಗಡಿಗೆಯನ್ನು ಒಡೆದು ರಾಜನು ತಿರುಗಿ ನೋಡುವಂತೆ ಮಾಡಿ, ಎರಡನೆಯದನ್ನು ಒಡೆದನು. ಆಗ ರಾಜನ ತಲೆಯಿಂದ ಈಜೆಕಡೆಯೂ ಆಜಿಕಡೆಯೂ ಮೊಸರು ಸೋರಿತು. ಹೀಗೆ ಶಕ್ರನು ಅವನನ್ನು ಗೋಳಾಡಿಸಿದನು, ಪೀಡಿಸಿದನು, ಅವನಿಗೆ ಜುಗುಪ್ಸೆಯುಂಟುಮಾಡಿದನು.

ಆಗ್ಗ ಅವನು ಉಪದ್ರವಪಟ್ಟುದನ್ನು ತಿಳಿದು ಶಕ್ರನು ಗಾಡಿಯನ್ನು ಮರೆಮಾಡಿ, ಶಕ್ರನ ರೂಪವನ್ನು ನಿರ್ಮಿಸಿಕೊಂಡು ಕೈಯಲ್ಲಿ ವಜ್ರಾ ಯುಧವನ್ನು ಹಿಡಿದು ಆಕಾಶದಲ್ಲಿ ನಿಂತು, “ಪಾನಿ! ಅಧರ್ಮಿಕ ರಾಜ! ನೀನೇನು ಮುದುಕನಾಗುವುದಿಲ್ಲವೆ? ನಿನ್ನ ಶರೀರವನ್ನು ಮುಪ್ಪು ಹೊಡೆಯುವುದಿಲ್ಲವೆ? ಕ್ರೀಡಾಶೀಲನಾಗಿ ವೃದ್ಧರನ್ನು ಹೊಡೆಯುವ ಕೆಲಸ ಮಾಡುವೆ. ನಿನ್ನೊಬ್ಬನಿಂದಾಗಿ ಕೆಲಸಮಾಡಿ, ಸತ್ತಸತ್ತವರೆಲ್ಲಾ ನರಕಗಳ ತುಂಬಾ ಆಗುತ್ತಿದ್ದಾರೆ. ಜನರು ತಾಯಿ ತಂದೆಗಳನ್ನು ಕಾಪಾಡುನಂತಿಲ್ಲ. ಇಂತಹೆ ಕಾರ್ಯದಿಂದ ನೀನು ವಿರಾಮಗೊಳ್ಳದಿದ್ದರೆ ವಜ್ರಾಯುಧದಿಂದ ನಿನ್ನ ತಲೆಯನ್ನು ಸೀಳಿ ಬಿಡುವೆನು. ಇಂದಿನಿಂದ ಇಂತಹ ಕೆಲಸ ಮಾಡಬೇಡ” ಎಂದು ಗದರಿಸಿ, ತಾಯಿ ತಂದೆಗಳ ಗುಣವನ್ನು ಹೇಳಿತಿಳಿಸಿ, ವೃದ್ಧರನ್ನು ಸೇವಿಸುವುದ ರಿಂದಾಗುವ ಲಾಭವನ್ನು ಪ್ರಕಾಶಸಡಿಸಿ, ಬುದ್ಧಿ ಹೇಳ್ಳಿ ಸ್ವಸ್ಥಾನಕ್ಕೆ ಹೋದನು.

ರಾಜನಿಗೆ ಅಂದಿನಿಂದ ಅಂತಹ ಕೆಲಸ ಮಾಡಲು ಮನಸ್ಸು ಕೂಡ ಬರಲಿಲ್ಲ.

ವೀರಕ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲ್ಕು ಬೋಧಿಸತ್ತನು ಹಿಮವೆಂತ ಪ್ರದೇಶದಲ್ಲಿ ನೀರುಕಾಗೆಯ ಹೊಟ್ಟೆ ಯಲ್ಲಿ ಹುಟ್ಟಬಂದು, ಒಂದು ಸರೋವರದ ಬಳಿ ವಾಸಮಾಡಿದನು. ಅವನಿಗೆ ನೀರಕನೆಂದು ಹೆಸರಾಯಿತು.

ಆಗ ಕಾಶಿರಾಷ್ಟ್ರದಲ್ಲಿ ದುರ್ಭಿಕ್ಷವಾಯಿತು. ಜನರು ಕಾಗೆಗಳಿಗೆ ಅನ್ನ ಹಾಕಲಾರದೆಹೋದರು, ಯಕ್ಷರಿಗೂ ನಾಗರಿಗೂ ಬಲಿಗಳನ್ನು ಒಪ್ಪಿಸಲಾರದೆಹೋದರು. ಹೊಟ್ಟಿ ಗಿಲ್ಲದ ರಾಷ್ಟ್ರದಿಂದ ಕಾಗೆಗಳು ಒಂದೊಂದಾಗಿ ಕಾಡನ್ನು ಹೊಕ್ಕವು.

ಆಗ ವಾರಾಣಸಿಯಲ್ಲಿ ವಾಸಿಸುತ್ತಿದ್ದ ಸವಿಷ್ಠಕನೆಂಬ ಒಂದು ಕಾಗೆ ತನ ಹೆಂಡತಿಯನ್ನು ಕರೆದುಕೊಂಡು ವೀರಕನು ವಾಸಿಸುತ್ತಿದ್ದಲ್ಲಿಗೆ ಹೋಗಿ, ಅದೇ ಸರೋವರದ ಬಳಿ ಒಂದು ಕಡೆ ವಾಸಮಾಡಿಕೊಂಡಿತು.

ಅದು ಒಂದು ದಿವನ ಸರೋವರದಲ್ಲಿ ಆಹಾರ ಕೊಳ್ಳುತ್ತಾ, ನೀರಕನು ಸರೋವರಕ್ಕೆ ಇಳಿದು ಮೀನು ತಿಂದು ಪುನಃ ಮೇಲೆ ಬಂದು ಮ್ಳ ಒಣಗಿಸಿಕೊಳ್ಳುವುದನ್ನು ಕಂಡು, ಕಾಗೆಯನ್ನು ಆಶ್ರಯಿಸಿ ಅನೇಕ ಮೀನುಗಳನ್ನು ಪಡೆಯಬಹುದು. ಇದರ ಸೇವೆ ಮಾಡುವೆನು? ಎಂದು ಅದರ ಬಳಿ ಸಾರ್ಕಿ, ಏನಯ್ಯಾ?” ಎನ್ನಲು, “ಸ್ವಾಮಿ ನಿನ್ನ ಸೇವೆಮಾಡಲು ಬಯಸುವೆನು? ಎಂದು ಹೇಳಿ ಒಳ್ಳೆಯದು ೫.ಎಂದು ಅದು ಒಪ್ಪಿ ಕೂಳ್ಳ ಲು, ಅಂದಿನಿಂದ ಅದರ ಸೇವೆಗೆ ತೊಡಗಿತು.

ವೀರಕನೂ ಅಂದಿನಿಂದ ತಾನು ಬದುಕಲು ಸಾಕಷ್ಟು ತಿಂದು ಮೀನುಗಳನ್ನು ಮೇಲೆತ್ತಿ ಸವಿಷ್ಟಕನಿಗೆ ಕೊಡುವುಡು. ಅದು ಕೂಡ ತಾನು ಬದುಕಲು ಸಾಕಷ್ಟು ತಿಂದು, ಉಳಿದುದನ್ನು ಹೆಂಡತಿಗೆ ಕೊಡುವುದು.

ಅದಾದನಂತರ ಅದಕ್ಕೆ "ಇದು ಕಪ್ಪಾದ ನೀರು ಕಾಗೆ ನಾನೂ ಕಪ್ಪಾದವನು. ಕಣ್ಣು ಕೊಕ್ಕು ಕಾಲುಗಳಲ್ಲಿ ಯಾವುದರಲ್ಲೂ ಇದಕ್ಕೂ ನನಗೂ ಭೇದವಿಲ್ಲ. ಇಂದಿನಿಂದ ಇದು ಹಿಡಿದ ಮೀನುಗಳೊಡನೆ

ಹೀರಕ ೨೯

ನನಗೇನೂ ಕೆಲಸವಿಲ್ಲ. ನಾನೇ ಮೀನು ಹಿಡಿಯುನೆನು” ಎಂದು ಜಂಬ ಬಂತು.

ಅದು ವೀರಕನ ಬಳಿಸಾರಿ, “ಅಯ್ಯಾ, ಇಂದಿನಿಂದ ನಾನೇ ಸರೋವರಕ್ಕೆ ಇಳಿದು ಮೀನು ಹಿಡಿಯುನೆನು” ಎಂದಿತು.

ಅಯ್ಯಾ, ನೀರಿಗಿಳಿದು ಮೀನು ಹಿಡಿಯುವ ಕಾಕಕುಲದಲ್ಲಿ ನೀನು ಹುಟ್ಟಿಲಿಲ್ಲ. ನಾಶನಾಗಬೇಡ” ಎಂದು ಅದು ತಡೆಯಿತು.

ಆದರೂ ಸವಿಷ್ಟಕನು ಅದರ ಮಾತನ್ನು ಕೊಳ್ಳದೆ ಸರೋವರಕ್ಕೆ ಇಳಿದು, ನೀರನ್ನು ಹೊಕ್ಕು, ಮುಳುಗಿ, ಶೈವಲಗಳನ್ನು ಕತ್ತರಿಸಿಕೊಂಡು ಮೇಲೆ ಬರಲಾರದೆಹೋಯಿತು. ಶೈವಲಗಳ ಒಳಗೆ ಸಿಕ್ಕಿಕೊಂಡಿತು. ಕೊಕ್ಕಿನ ತುದಿ ಮಾತ್ರ ತಿಳಿದುಬರುತ್ತಿತ್ತು. ಅದು ಉಸಿರಾಡಲಾರದೆ ನೀರಿನ ಒಳಗೇ ಜೀವಬಿಟ್ಟಿ ತು.

ಆಗ ಅದರ ಹೆಂಡತಿ ಅದು ಬರುವುದನ್ನು ಕಾಣದೆ, ನಡೆದುದನ್ನು ತಿಳಿಯಬೇಕೆಂದು ವೀರಕನ ಬಳಿ ಹೋಗಿ, ಸ್ವಾಮಿ, ಸವಿಷ್ಟಕನು ಕಂಡುಬರುವುದಿಲ್ಲ. ಅದೆಲ್ಲಿ?” ಎಂದು ಕೇಳುತ್ತಾ, ವೀರಕ್ತ ಮಂಜುಳವಾಗಿ ಮಾತನಾಡುವ, ನವಿಲಿನಂತೆ ಹೊಳೆಯುವ ಕತ್ತುಳ್ಳ, ನನ್ನ್ನ ಪತಿಯಾದ ಸವಿಷ್ಟಕನನ್ನು ನೋಡಿದೆಯ?” ಎಂದಿತು.

ನೀರಕನು ಅದನ್ನು ಕೇಳಿ, “ಹೌದು ನಿನ್ನ ಗಂಡ ಹೋಗಿರುವ ಸ್ಟಾನ ನನಗೆ ಗೊತ್ತು” ಎಂದು ಹೇಳುತ್ತಾ, “ನೀರಿನಲ್ಲೂ ನೆಲದಲ್ಲೂ ಸಂಚರಿಸುತ್ತಾ ನಿತ್ಯವೂ ಮೀನು ತಿನ್ನುವ ಹಕ್ಕಿಯನ್ನು ಅನುಕರಿಸ ಹೋಗಿ, ಸವಿಷ್ಟ್ರಕನು ಶೈವಲಗಳಲ್ಲಿ ಸಿಕ್ಕ ಬಿದ್ದು ಸತ್ತಿತು” ಎಂದಿತು.

ಹೆಣ್ಣುಕಾಗೆ ಅದನ್ನು ಕೇಳಿ ಗೋಳಾಡುತ್ತಾ ವಾರಾಣಸಿಗೇ ಹೋಯಿತು.

ಗೂಥ ಪ್ರಾಣ

ಹಿಂದೆ ಅಂಗ ಮಾಗಧಗಳ ಜನರು ಒಬ್ಬರೊಬ್ಬರ ರಾಷ್ಟ್ರಗಳಿಗೆ ಹೋಗುತ್ತಿದ್ದರು. ಆಗ ಒಂದು ದಿವಸ ಅವರು ಎರಡೂ ರಾಷ್ಟ್ರಗಳ ಗಡಿಯ ಒಂದು ಮನೆಯಲ್ಲಿ ತಂಗಿ, ಸುರೆಯನ್ನು ಕುಡಿದು, ಮೀನು ಮಾಂಸವನ್ನು ತಿಂದು, ಬೆಳಗ್ಗೆ ಗಾಡಿಗಳನ್ನು ಹೂಡಿಕೊಂಡು ಹೋದರು. ಅವರು ಹೋದಾಗ, ಸೆಗಣಿಯನ್ನು ತಿಂದು ಜೀವಿಸುವ ಒಂದು ಪ್ರಾಣಿ ಸೆಗಣಿಯ ವಾಸನೆಯಿಂದ ಬಂದಿತು. ಬಂದು ಅವರು ಕುಡಿದ ಕಡೆ ಚೆಲ್ಲಿದ್ದ ಸುರೆಯನ್ನು ಕಂಡು, ಬಾಯಾರಿಕೆಗಾಗಿ ಅದನ್ನು ಕುಡಿದು, ಮದಹೊಂದಿ, ಸೆಗಣಿಯ ಮುದ್ದೆಯ ಮೇಲೇರಿತು. ಹಸಿ ಸೆಗಣಿ, ಅದು ಏರಿದುದರಿಂದ ಕೊಂಚ ಕುಸಿಯಿತು. ಆಗ ಅದು “ಭೂಮಿ ನನ್ನ ಭಾರ ತಾಳಲಾರದುಗ ಎಂದು ಕೊಗಿಕೊಂಡಿತು. ಅದೇ ಕ್ಷಣದಲ್ಲಿ ಒಂದು ಮದದಾನೆ ಎಡೆಯನ್ನು ಸೇರಿ ಸೆಗಣಿಯ ವಾಸನೆಯನ್ನು ಮೂಸಿ, ಜುಗುಪ್ಸೆ ಪಟ್ಟು ಹೊರಟತು. ಅದು ಅದನ್ನು ಕಂಡು, “ಇದು ಭಯಗೊಂಡು ಓಡುತ್ತಿದೆ” ಎಂದು ಎಣಿಸಿ, “ಇದರೊಡನೆ ಕಾದಾಡಬೇಕು” ಎಂದು ಅದನ್ನು ಕಾಳಗಕ್ಕೆ ಕರೆಯುತ್ತಾ «ಶೂರನಾದ ನನ್ನೊಡನೆ ಶೂರನಾದ ನೀನು ವಿಕ್ರಾಂತದಿಂದ ಹೋರಾಡು, ಬಾ. ಬಾ, ಆನೆ, ಹಿಂದಿರುಗು. ಹೆದರಿಕೊಂಡೇಕೆ ಓಡುವೆ? ನನ್ನ ನಿನ್ನ ವಿಕ್ರಮವನ್ನು ಅಂಗ ಮಾಗಧಗಳವರು ನೋಡಲಿ” ಎಂದಿತು. ಆನೆ ಕಿವಿಕೊಟ್ಟು, ಅದರ ಮಾತು ಕೇಳಿ, ಹಿಂದಿರುಗಿ, ಅದರ ಬಳಿ ಹೋಗಿ, ಅದನ್ನು ಹೀಯಾಳಿಸುತ್ತಾ, “ನಿನ್ನನ್ನು ಕಾಲಿನಿಂದಾಗಲಿ ಕೊಂಬಿನಿಂದಾಗಲಿ ಸೊಂಡಿಲಿನಿಂದಾಗಲಿ ಕೊಲ್ಲುವುದಿಲ್ಲ. ನಿನ್ನನ್ನು ಲದ್ದಿಯಿಂದ ಕೊಲ್ಲುವೆನು. ಸೆಗಣಿ ಸೆಗಣಿಯಿಂದ ಸಾಯಲಿ” ಎಂದು ಅದರ ತಲೆಯ ಮೇಲೆ ದೊಡ್ಡ ಲದ್ದಿಯನ್ನು ಬೀಳಿಸಿ, ನೀರು ಬಿಟ್ಟು, ಅಲ್ಲಿಯೇ ಅದರ ಜೀವವನ್ನು ಕೊನೆಗಾಣಿಸಿ, ಫೀಂಕರಿಸುತ್ತಾ ಕಾಡಿ ಕೊಳಕ್ಕೆ ಹೋಯಿತು.

ಕಿಂಶುಕೋಸಪುಮ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲ್ಲು ಅವನಿಗೆ ನಾಲ್ವರು ಮಕ್ಕಳಾದರು.

ಅವರು ಒಂದು ದಿವಸ ಸಾರಥಿಯನ್ನು ಕರೆದು, “ಅಯ್ಯಾ, ನಾವು ಕೆಂಶುಕವನ್ನು ಕಾಣಬಯಸುವೆವು. ನಮಗೆ ಕಿಂಶುಕವ್ಳ ಕ್ಷವನ್ನು ಕಾಣಿಸು? ಎಂದರು.

ಸಾರಥಿ “ಒಳ್ಳೆಯದು, ಕಾಣಿಸುತ್ತೇನೆ” ಎಂದು ಹೇಳಿ ನಾಲ್ವರಿಗೂ ಒಟ್ಟಿಗೆ ತೋರಿಸದೆ, ಜ್ಯೇಷ್ಠಪುತ್ರನನ್ನು ಮಾತ್ರ ರಥದಲ್ಲಿ ಕುಳ್ಳಿರಿಸಿ ಕಾಡಿಗೆ ಕರೆದುಕೊಂಡು ಹೋಗಿ, "ಇದು ಕಂಶುಕ” ಎಂದು ಕುಡಿಬಿಡುವ ಕಾಲದಲ್ಲಿ ಕಿಂಶುಕವನ್ನು ಕಾಣಿಸಿದನು. ಇನ್ನೊಬ್ಬನಿಗೆ ಚಿಗುರೆಲೆಯ ಕಾಲದಲ್ಲೂ, ಮತ್ತೊಬ್ಬನಿಗೆ ಹೂಬಿಟ್ಟ ಕಾಲದಲ್ಲೂ, ಬೇರೊಬ್ಬರಿಗೆ ಫಲಬಿಟ್ಟ ಕಾಲದಲ್ಲೂ ಕಾಣಿಸಿದನು.

ಅನಂತರ ನಾಲ್ವರು ಸೋದರರೂ ಒಂದಾಗಿ ಕುಳಿತು “ಕಿಂಶುಕ ವೆಂಬುದು ಹೇಗಿದೆ?” ಎಂದು ಮಾತನಾಡುತ್ತಿದ್ದರು. ಒಬ್ಬನು “ಸುಟ್ಟ ಕೊರಡಿನಂತಿದೆ” ಎಂದನು. ಎರಡನೆಯವನು “ಆಲದ ಮರದಂತಿದೆ? ಎಂದನು. ಮೂರನೆಯವನು “ಮಾಂಸದ ಮುದ್ದೆ ಯಂತಿದೆ? ಎಂದನು. ನಾಲ್ಕನೆಯವನು “ಶಿರೀಷ ವೃಕ್ಷದಂತಿದೆ” ಎಂದನು.

ಅವರಲ್ಲಿ ಒಬ್ಬರಿಗೆ ಇನ್ನೊಬ್ಬರ ಮಾತು ಸರಿಬರಲಿಲ್ಲ. ಅವರು ತಂದೆಯ ಬಳಿಹೋಗಿ, “ದೇವ, ಕಿಂಶುಕವೆಂಬುದು ಎಂತಹದು?” ಎಂದು ಕೇಳಿ “ನೀವೇನು ಹೇಳಿದಿರಿ?” ಎನ್ನಲು, ತಾವು ಮಾತನಾಡಿದ ಬಗೆಯನ್ನು ರಾಜನಿಗೆ ತಿಳಿಸಿದರು.

ರಾಜನು “ನೀವು ನಾಲ್ವರೂ ಕಿಂಶುಕವನ್ನು ಕಂಡಿರಿ. ಆದರೆ ಕೆಂಶುಕವನ್ನು ಕಂಡಾಗ, ನೀವು "ಇಂತಹ ಕಾಲದಲ್ಲಿ *ಂಶುಕ ಹೇಗಿರುವುದು? ಇಂತಹ ಕಾಲದಲ್ಲಿ ಕೆಂಶುಕ ಹೇಗಿರುವುದು? ಎಂದು ವಿಭಾಗಮಾಡಿ ಸಾರಥಿಯನ್ನು ಕೇಳಲಿಲ್ಲ. ಅದರಿಂದ ನಿಮಗೆ ಸಂದೇಹ ಹುಟ್ಟತು ಎಂದು ಹೇಳಿದನು.

ಶ್ಶೀ

ಆ.

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿರಲ್ಕು ಬೋಧಿಸತ್ತ್ವನು ಕಾಶಿರಾಷ್ಟ್ರದ ಬ್ರಾ ಹ್ಮಣಕುಲದಲ್ಲಿ ಹುಟ್ಟಿ ದನು. ವಯಸ್ಸು ಬಂದ ಮೇಲೆ ತಕ್ಷಶಿಲೆಯಲ್ಲಿ ವಿದ್ಯೆಗಳನ್ನು ಕಲಿತು, ಮನೆಯಲ್ಲಿ ವಾಸಮಾಡುತ್ತಿದ್ದು, ತಾಯಿತಂದೆ ಕಾಲವಾದಾಗ ಖಿನ್ನನಾಗಿ ಮನೆ ಬಿಟ್ಟು ಹೊರಟು, ಹಿಮವಂತ ಪ್ರದೇಶದಲ್ಲಿ ಖುಹಿಯಂತೆ ವಾಸಿಸಿ ಸಮಾ ಪತ್ತಿಗಳನ್ನು ಉಂಟುಮಾಡಿಕೊಂಡನು.

ಅನಂತರ ಬಹುಕಾಲದ ಬಳಿಕ ಉಪ್ಪು ಹುಳಿಗಳ ರುಚಿನೋಡುವುದ ಕ್ಕಾಗಿ ಹೋಗಿ, ವಾರಾಣಸಿರಾಜನ ಉದ್ಯಾನದಲ್ಲಿ ವಾಸಮಾಡಿದನು. ಮರುದಿವಸ ಭಿಕ್ಷೆಗಾಗಿ ತಿರುಗುತ್ತಾ ಹೆಸ್ಟ್ರಾಚಾರ್ಯನ ಮನೆಬಾಗಿಲಿಗೆ ಬಂದನು. ಅವನು ಅವನ ಸಂಚಾರದಿಂದಲೂ ವಿಹಾರದಿಂದಲೂ ಪ್ರಸನ್ನನಾಗಿ, ಭಿಕ್ಷೆಯನ್ನು ಕೊಟ್ಟು, ಉದ್ಯಾನದಲ್ಲಿ ಮಾಸಮಾಡಿಸಿ, ನಿತ್ಯವೂ ಆರೈಕೆಮಾಡುತ್ತಿದ್ದನು.

ತರುತ್ತಾ, ಕಾಲಕ್ಕೆ ಸರಿಯಾಗಿ ನಗರವನ್ನು ಪ್ರವೇಶಿಸಲಾಗಲಿಲ್ಲ.

ಸಾಯಂಕಾಲ ಒಂದು ದೇವಾಲಯದಲ್ಲಿ ಕಟ್ಟಗೆಯ ಕಂತೆಯನ್ನು ತಲೆಯ ಕೆಳಗೆಮಾಡಿ ಮಲಗಿದನು.

ದೇವಾಲಯದಲ್ಲಿ ಕಟ್ಟಹಾಕದೆ ಬಿಟ್ಟಿ ಬಹು ಕೋಳಿಗಳಿದ್ದುವು. ಅವು ಅಲ್ಲಿಗೆ ಸ್ವಲ್ಪ ದೂರದ ಮರದಲ್ಲಿ ಮಲಗಿದ್ದವು. ಅವುಗಳಲ್ಲಿ ಮೇಲೆ ಮಲಗಿದ್ದ ಕೋಳಿ ಬೆಳಗಿನ ಜಾವದಲ್ಲಿ ಕೆಳಗೆ ಮಲಗಿದ್ದ ಕೋಳಿಯ ಮೈಮೇಲೆ ಅಚ್ಚಿ ಕೈತು. “ನನ್ನ ಮೈಮೇಲೆ ಅಚ್ಚಿ ಕೈದವರಾರು?” ಎಂದು ಅದು ಕೇಳಲ್ಲ, ನಾನು” ಎಂದಿತು. “ಏಕೆ? ಎಂದು ಕೇಳಲ್ಕು ಗಮನಿಸಲಿಲ್ಲ” ಎಂದು ಹೇಳುತ್ತಾ ಪುನಃ ಅಚ್ಚಿಕ್ಕಿತು.

ಆಗ ಎರಡೂ ಒಂದನ್ನೊಂದು ಆಡಿಕೊಳ್ಳುತ್ತಾ ನಿನ್ನ ಬಲ ವೇನು? ನಿನ್ನ ಬಲವೇನು? ಎಂದು ಕಲಹವಾಡಿದವು. ಆಗ ಕೆಳಗೆ ಮಲಗಿದ್ದ ಕೋಳಿ 4 ನನ್ನನ್ನು ಕೊಂದು, ಬೆಂಕಿಯಲ್ಲಿ

ವೇಳೆಯಲ್ಲಿ ಒಬ್ಬ ಕಟ್ಟಗೆ ತರುವವನು ಕಾಡಿನಿಂದ ಕಟ್ಟಿಗೆ

ಶ್ರೀ

ಬೇಯಿಸಿದ ನನ್ನ ಮಾಂಸವನ್ನು ತಿಂದರೆ, ಬೆಳಗಾಗುವ ವೇಳೆಗೆ ಸಾವಿರ ಕಾರ್ಷಾಪಣ ದೊರಕುತ್ತದೆ” ಎಂದಿತು.

ಮೇಲೆ ಮಲಗಿದ್ದ ಕೋಳಿ, " ಓನೋ, ನೀನು ಇಷ್ಟಕ್ಕೇ ಗರ್ವ ಪಡಬೇಡ. ನನ್ನ ಮೈ ಯೊಳಗಿನ ಗಟ್ಟಮಾಂಸವನ್ನು ತಿಂದವನು ರಾಜ ನಾಗುವನು. ಹೊರಗಿನ ಮಾಂಸವನ್ನು ತಿಂದ ಪುರುಷನು ಸೇನಾಪತಿ ಯಾಗುವನು, ತಿಂದ ಸ್ತ್ರೀ ಪಟ್ಟಿದ ರಾಣಿಯಾಗುವಳು. ಮೂಳೆಯ ಬಳಿಯ ಮಾಂಸವನ್ನು ತಿಂದವನು ಸಂಸಾರಿಯಾಗಿದ್ದರೆ ಭಂಡಾರಿ ಯಾಗುವನು, ಸಂನ್ಯಾಸಿಯಾಗಿದ್ದರೆ ರಾಜನಿಗೆ ಹಿತ್ಳೆ ಷಿಯಾಗುವನು ಶಿ ಎಂದಿತು.

ಕಟ್ಟಿಗೆ ತರುವವನು ಅವುಗಳ ಮಾತನ್ನು ಕೇಳ್ಳಿ ರಾಜ್ಯ ದೊರಕಿದರೆ ಸಾವಿರದಿಂದೇನೂ ಕೆಲಸವಿಲ್ಲ ಎಂದು ಹತ್ತಿ, ಮೇಲೆ ಮಲಗಿದ್ದ ಕೋಳಿಯನ್ನು ಹಿಡಿದು, ಸಾಯಿಸಿ, ಸೆರಗಿನಲ್ಲಿ ಕಟ್ಟಿ, " ರಾಜ ನಾಗುನೆನು? ಎಂದು ಹೋಗಿ, ತೆರೆದ ಬಾಗಿಲಿನಿಂದ ನಗರದೊಳಕ್ಕೆ ಹೊಕ್ಕು, ಕೋಳಿಯ ಚರ್ಮವನ್ನು ಸುಲಿದು ಹೊಟ್ಟೆ ಯನ್ನು ಶೋಧಿಸಿ, "ಕೋಳಿಯ ಮಾಂಸವನ್ನು ಚೆನ್ನಾಗಿ ಅಡುಗೆ ಮಾಡು” ಎಂದು ಹೆಂಡತಿಗೆ ಕೊಟ್ಟಿ ನು. ಅವಳು ಕೋಳಿಯ ಮಾಂಸವನ್ನೂ ಅನ್ನವನ್ನೂ ಅಡುಗೆಮಾಡಿ, ಊಟ ಮಾಡೋಣ” ನೆಂದು ಅವನ ಮುಂದಿಟ್ಟಳು.

ಅವನು ಭದ್ರೆ, ಮಾಂಸ ಮಹಾ ಪ್ರಭಾವವುಳ್ಳದ್ದು. ಇದನ್ನು ತಿಂದು ನಾನು ರಾಜನಾಗುನೆನು, ನೀನು ಪಟ್ಟದ ರಾಣಿ ಯಾಗುವೆ” ಎಂದು ಅನ್ನವನ್ನೂ ಮಾಂಸವನ್ನೂ ತೆಗೆದುಕೊಂಡು ಗಂಗಾತೀರಕ್ಕೆ ಹೋಗಿ, ಸ್ನಾನಮಾಡಿ ತಿನ್ನುವೆನು” ಎಂದು ಅನ್ನದ ಪಾತ್ರೆ ಯನ್ನು ತೀರದಲ್ಲಿಟ್ಟು, ಸ್ನಾನಕ್ಕಾಗಿ ಇಳಿದನು.

ಅದೇ ಕ್ಷಣದಲ್ಲಿ ಗಾಳಿಯಿಂದ ನೀರು ಉಕ್ಕಿ ಬಂದು ಅನ್ನದ ಪಾತ್ರೆಯನ್ನು ಕೊಂಡುಹೋಯಿತು. ನದಿಯ ಪ್ರವಾಹ ಅದನ್ನು ಒಯ್ಯುತ್ತಿರಲು, ನದಿಯ ಕಳಗಡೆ ಆನೆಗಳಿಗೆ ಸ್ನಾನಮಾಡಿಸುತ್ತಿದ್ದ ಒಬ್ಬ ಹಸ್ತಾ ಚಾರ್ಯನಾದ ಮಹಾಮಾತ್ರನು ಅದನ್ನು ಕಂಡು, ಮೇಲೆತ್ತಿಸಿ, ಅಲ್ಲಿ ಏನು?” ಎಂದು ಕೇಳಿದನು. ಅವರು “ಅನ್ನ

ಷ್ಠ

ಕಿ ಮಣಿಕಂಠ

ಮತ್ತು ಕೋಳಿಯ ಮಾಂಸ್ಕ ಸ್ವಾಮಿ”, ಎಂದು ಹೇಳಲು, ಅನನು ಅದನ್ನು ಮುಚ್ಚಿಸಿ, ಮುದ್ರೆಮಾಡಿಸಿ, " ನಾನು ಬರುವವರೆಗೆ ಅನ್ನ ವನ್ನು ಬಿಚ್ಚಬೇಡ » ಎಂದು ಹೆಂಡತಿಗೆ ಕಳಿಸಿದನು.

ಕಟ್ಟಿಗೆ ತರುವವನ ಬಾಯಿಗೆ ಮರಳೂ ನೀರೂ ಹೊಕ್ಕು, ಅವನ ಹೊಟ್ಟಿ ಊದಿಕೊಂಡಿತು. ಅವನು ಓಡಿಹೋದನು.

ಆಗ್ರ ಹೆಸ್ಟ್ಯಾಚಾರ್ಯನ ಹಿತ್ಸೆ ಸಿಯಾದ ಒಬ್ಬ ತಪಸ್ವಿಯು “ನನ್ನನ್ನು ಸೇವಿಸುವ ಹೆಸ್ಟಾಚಾರ್ಯನು ಆನೆಯ ಬಳಿಯನ್ನು ಬಿಡುವುದಿಲ್ಲ. ಅವನಿಗೆ ಯಾವಾಗ ಸಂಪತ್ತು ಪ್ರಾಪ್ತವಾಗುತ್ತದೆ?” ಎಂದು ತನ್ನ ದಿವ್ಯಚಕ್ಷುಸ್ಸಿನಿಂದ ಗಮನಿಸುತ್ತಾ, ಅವನನ್ನು ಕಂಡು, ಅವನ್ನು ಮಾಡಿದುದನ್ನು ತಿಳಿದು, ಮೊದಲೇ ಹೋಗಿ ಹಸ್ತಾ ಚಾರ್ಯನ ಮನೆಯಲ್ಲಿ ಕುಳಿತನು.

ಹಸ್ತಾ ಚಾರ್ಯನು ಬಂದು, ವಂದಿಸಿ, ಒಂದು ಕಡೆ ಕುಳಿತು ಅನ್ನದ ಪಾತ್ರೆಯನ್ನು ತರಿಸಿ "ತಾಪಸನಿಗೆ ಮಾಂಸವನ್ನೂ ನೀರನ್ನೂ ತಂದು ನೀಡಿರಿ” ಎಂದನು. ತಾಪಸನು ಅನ್ನವನ್ನು ತೆಗೆದುಕೊಂಡು, ಮಾಂಸ ಕೊಡಲುಬಂದರೆ ತೆಗೆದುಕೊಳ್ಳದೆ, " ಮಾಂಸವನ್ನು ನಾನು ತಿಳಿದು ಹೆಂಚುತ್ತೇನೆ” ಎಂದನು. "ಹಾಗೆಯೇ ಮಾಡಿ, ಸ್ವಾಮಿ” ಎನ್ನಲು ಗಟ್ಟ ಮಾಂಸ ಮೊದಲಾದವುಗಳನ್ನು ಒಂದೊಂದು ಭಾಗ ಮಾಡಿ, ಗಟ್ಟಿ ಮಾಂಸವನ್ನು ಹಸ್ತಾ ಚಾರ್ಯನಿಗೂ ಹೊರಗಿನ ಮಾಂಸ ವನ್ನು ಅವನ ಹೆಂಡತಿಗೂ ಕೊಡಿಸಿದರು. ಮೂಳೆಯ ಹತ್ತಿರದ ಮಾಂಸ ವನ್ನು ತಾನು ಸವಿದನು. ಊಟ ಮುಗಿದ ಮೇಲೆ ಹೋಗುತ್ತಾ ನೀನು ಇಂದಿನಿಂದ ಮೂರನೆಯ ದಿವಸ ರಾಜನಾಗುವೆ. ಮೈ ಮರೆಯದಿರು” ಎಂದು ಹೇಳುತ್ತಾ ಹೊರಟನು.

ಮೂರನೆಯ ದಿವಸ ಒಬ್ಬ ಸಾಮಂತರಾಜನು ಬಂದು ವಾರಾಣಸಿಯನ್ನು ಸುತ್ತಿಮುತ್ತಿದನು. ವಾರಾಣಸಿರಾಜನು ಹಸ್ತಾ ಚಾರ್ಯನಿಗೆ ರಾಜವೇಷ ಹಾಕಿಸಿ, “ಆನೆಯನ್ನು ಏರಿ ಯುದ್ಧಮಾಡು” ಎಂದು ಆಜ್ಞೆ ಮಾಡಿ, ತಾನು ಅಜ್ಞಾ ತಕನೇಷದಿಂದ ಸೇನೆಯೊಡನೆ

ಶ್ರೀ ೩೫

ತಿರುಗಾಡುತ್ತಾ, ಮಹಾವೇಗದಿಂದ ಬಂದ ಬಾಣವೊಂದು ಚುಚ್ಚಲು ಅದೇ ಕ್ಷಣದಲ್ಲೇ ಸತ್ತನು. ಹೆಸ್ಪ್ಯಾಚಾರ್ಯನು ಅನನು ಸತ್ತುದನ್ನು ತಿಳಿದು, ಬಹು ಕಾರ್ಷಾಪಣಗಳನ್ನು ತೆಗೆದುಕೊಂಡು ಬರಿಸಿ, “ಧನ ಬೇಕಾದವರು ಮುಂದೆ ಬಂದು ಯುದ್ಧಮಾಡಲಿ” ಎಂದು ಡಂಗುರ ಹೊಯಿಸಿದನು. ಬಲಶಾಲಿಗಳಾದ ಸೈನಿಕರು ಮುಹೂರ್ತದೊಳಗೆ ಪ್ರತಿರಾಜನ ಜೀವವನ್ನು ಕೊನೆಗಾಣಿಸಿದರು.

ಅಮಾತ್ಯರು ರಾಜನ ಶರೀರಕ್ಕೆ ಮಾಡಬೇಕಾದುದನ್ನು ಮಾಡಿ, “ಯಾರನ್ನು ರಾಜನನ್ನಾಗಿ ಮಾಡೋಣ? ಎಂದು ಎಲ್ಲರೂ ಕೂಡಿ ಆಲೋಚಿಸುತ್ತಾ “ರಾಜನು ಬದುಕಿರುವಾಗ ತನ್ನ ವೇಷವನ್ನು ಹಸ್ತಾ ಚಾರ್ಯನಿಗೆ ಕೊಟ್ಟಿ ನು. ಇವನೇ ಯುದ್ಧಮಾಡಿ ರಾಜ್ಯವನ್ನು ಹಿಡಿದನು. ಇವನಿಗೇ ರಾಜ್ಯ ಕೊಡೋಣ” ಎಂದು ಅವನಿಗೆ ರಾಜ್ಯಾಭಿಷೇಕ ಮಾಡಿದರು, ಅವನ ಹೆಂಡತಿಯನ್ನು ಪಟ್ಟದರಾಣಿ ಮಾಡಿದರು. ಬೋಧಿಸತ್ತ್ವನು ರಾಜನ ಹಿತ್ಸೆ ಹಯಾದನು.

ಮಣಿಚೋರ

ಹಿಂದೆ, ವಾರಾಣಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿ ರಲ್ಕು ವಾರಾಣಸಿಗೆ ಬಹುದೂರವಲ್ಲದ. ಗ್ರಾಮದಲ್ಲಿನ ಗೃಹಸ್ಥರ ಮನೆಯಲ್ಲಿ ಬೋಧಿಸತ್ತ ನು ಜನ್ಮತಾಳಿದನು.

ಅವನಿಗೆ ವಯಸ್ಸುಬರಲ್ಕು ವಾರಾಣಸಿಯಿಂದ ಒಂದು ಒಳ್ಳೆಯ ಕುಲದ ಮಗಳನ್ನು Ms ಅವಳು ಪ್ರಿ ಯಳಾಗಿದ್ದ ಛಳ್ಕು ಒಳ್ಳೆ ರೂಪ ವತಿಯಾಗಿದ್ದಳು, ದೇವಾಪ್ಸರೆಯಂತೆ ನೋಟಕ್ಕೆ" ತಕ್ಕ ನಳಾಗಿದ್ದ ಛು ಪುಷ್ಟ ಲತೆಯಂತೆ ಲಲಿತೆಯಾಗಿದ್ದಳು, ಮತ್ತ ಕನ ರಿಯಂತಿದ್ದ ಳು. ಅವಳಿಗೆ ಸುಜಾತೆಯೆಂದು ಹೆಸರು. ಅವಳು ಪತಿವ್ರತೆ, ಶೀಲಾಚಾರ ಸೆಂಪನ್ನೈ ವ್ರತಸಂಪನ್ನೆ.. ನಿತ್ಯಕಾಲವೂ ಅವಳು ತನ್ನ ಗಂಡನ, ಅತ್ತೆ ಮಾವಂದಿರ ಸೇವೆಯಲ್ಲೇ ಇರುತ್ತಿದ್ದಳು. ಅವಳು ಬೋಧಿಸತ್ತ್ಯನಿಗೆ ಪ್ರಿಯೆಯಾದಳು, ಇಷ್ಟೆ ಯಾದಳು. ಹೀಗೆ ಅವರಿಬ್ಬರೂ ಸಂತೋಷದಿಂದ ಒಂದೇ ಮನಸ್ಸುಳ್ಳವರಾಗಿ ಒಟ್ಟಿಗೆ ವಾಸಿಸುತ್ತಿದ್ದರು.

ಆಗ ಒಂದು ದಿವಸ ಸುಜಾತೆ “ತಾಯಿತಂದೆಯನ್ನು ನೋಡಲು ಆಸೆಯಾಗುವುದು” ಎಂದು ಬೋಧಿಸತ್ತ್ವನಿಗೆ ತಿಳಿಸಿದಳು. ಅವನು “ಒಳ್ಳೆಯದ್ದು ಭದ್ರೆ. ದಾರಿಗೆ ಸಾಕಾಗುವಷ್ಟು ಬುತ್ತಿ ಸಿದ್ಧ ಪಡಿಸಿಕೊ” ಎಂದು ಬಗೆಬಗೆಯ ಖಾದ್ಯಗಳನ್ನು ಅಡುಗೆ ಮಾಡಿಸಿ, ಖಾದ್ಯವೇ ಮೊದಲಾದವುಗಳನ್ನು ಗಾಡಿಯಲ್ಲಿ ಇಡಿಸಿ, ಗಾಡಿಯನ್ನು ನಡಸಿದನು. ಅವನು ಗಾಡಿಯ ಮುಂದೆ ಇದ್ದನು, ಅವಳು ಹಿಂದೆ ಇದ್ದಳು.

ಅನರು ನಗರದ ಹತ್ತಿರ ಹೋಗಿ, ಗಾಡಿಯನ್ನು ಬಿಚ್ಚಿ ಸ್ಪಾನ ಮಾಡಿ ಉಂಡರು. ಪುನಃ ಬೋಧಿಸತ್ತ್ವನು ಗಾಡಿಯನ್ನು ಕಳ, ಮುಂದೆ ಕುಳಿತನು. ಸುಜಾತೆ ಬೇರೆ ವಸ್ತ್ರ ಗಳನ್ನು ಧರಿಸಿ ಮಾಡಿಕೊಂಡು ಹಿಂದೆ ಕುಳಿತಳು.

ಗಾಡಿ ನಗರದೊಳಕ್ಕೆ ಬರುವಾಗ ವಾರಾಣಸಿರಾಜನು ಆನೆಯ ಮೇಲೆ ಕುಳಿತು ನಗರ ಪ್ರದಕ್ಷಿಣಮಾಡುತ್ತಾ ಸ್ಥಳಕ್ಕೆ ಬಂದನು. ಸುಜಾತೆ ಕೆಳಗಿಳಿದು 8 ಹಿಂದೆ ನಡೆದು ಹೋಗುತ್ತಿದ್ದಳು

ಮಣಿಟೋರ ೩೭

ರಾಜನು ಅವಳನ್ನು ಕಂಡನು. ಅವನ ಮನಸ್ಸನ್ನೂ ಕಣ್ಣನ್ನೂ ಅವಳ ರೂಪಸಂಪತ್ತಿ ಸೆಳೆಯಿತು. ಅವನಿಗೆ ಅವಳ ಮೇಲೆ ಆಸೆಯಾಯಿತು. ಆಗ ಅವನು “ಹೋಗು. ಇವಳಿಗೆ ಗಂಡನಿರುನನೋ ಇಲ್ಲವೋ ತಿಳಿದು ಬಾ” ಎಂದು ಒಬ್ಬ ಅಮಾತ್ಯನನ್ನು ಕಳಿಸಿದನು. ಅವನು ಹೋಗಿ ಅವಳಿಗೆ ಗಂಡನಿರುವುದನ್ನು ತಿಳಿದು, ಗಂಡನಿದ್ದಾನೆ, ದೇವ. ಗಾಡಿಯ ಮುಂದೆ ಕುಳಿತವನು ಇವಳ ಗಂಡ” ಎಂದನು. ರಾಜನು ತನ್ನ ಸಿಕ್ಕಿ ಬಿದ್ದ ಮನಸ್ಸನ್ನು ಬಿಡಿಸಿಕೊಳ್ಳ ಲಾರದೆ ಕಾತರನಾಗಿ, ಒಂದಾನೊಂದು ಉಪಾಯದಿಂದ ಇವನನ್ನು ಕೊಲ್ಲಿಸಿ, ಇವನ ಹೆಂಡತಿಯನ್ನು ಹಿಡಿ ಯುವೆನು” ಎಂದು ಚಿಂತಿಸಿ ಒಬ್ಬನನ್ನು ಕರೆದು, ಅಯ್ಯಾ, ಹೋಗು. ಬೀದಿಯಲ್ಲಿ ಹೋಗುವವನಂತೆ ಹೋಗಿ, ಚೂಡಾಮಣಿಯನ್ನು ಪುರುಷನ ಗಾಡಿಯಲ್ಲಿ ಹಾಕಿ ಬಾ” ಎಂದು ಚೂಡಾಮಣಿಯನ್ನು ಕೊಟ್ಟು ಕಳಿಸಿದನು. ಅವನು" ಒಳ್ಳೆಯದು' ಎಂದು ಅದನ್ನು ತೆಗೆದು ಕೊಂಡು ಹೋಗಿ, ಗಾಡಿಯಲ್ಲಿರಿಸಿ, ಇರಿಸಿದೆನು ದೇವ” ಎಂದು ಬಂದು ತಿಳಿಸಿದನು. ರಾಜನು ನನ್ನ ಚೂಡಾಮಣಿ ಕಳೆದುಹೋಗಿದೆ? ಎಂದನು. ಜನರು ಕೋಲಾಹಲವೋ ಕೋಲಾಹಲ ಮಾಡಿದರು. ರಾಜನು “ಎಲ್ಲಾ ದ್ವಾರಗಳನ್ನೂ ಮುಚ್ಚಿ, ಸಂಚಾರವನ್ನು ಕತ್ತರಿಸಿ ಕಳ್ಳನನ್ನು ಹುಡುಕಿರಿ” ಎಂದನು. ರಾಜಪುರುಷರು ಹಾಗೆಯೇ ಮಾಡಿದರು. ನಗರದಲ್ಲಿ ಗಲಭೆಯೋ ಗಲಭೆಯಾಯಿತು.

ಇನ್ನೊಬ್ಬನು ಜನರನ್ನು ಕರೆದುಕೊಂಡು ಬೋಧಿಸತ್ತ್ವನ ಬಳಿ ಹೋಗಿ, " ಓವೋ, ಗಾಡಿ ನಿಲ್ಲಿಸು ರಾಜನ ಚೂಡಾಮಣಿ ಕಳೆದು ಹೋಗಿದೆ. ಗಾಡಿಯನ್ನು ಹುಡುಕುವೆವು” ಎಂದು ಗಾಡಿಯನ್ನು ಹುಡುಕುತ್ತಾ, ತಾನು ಇರಿಸಿದ್ದ ಮಣಿಯನ್ನು ತೆಗೆದುಕೊಂಡು, ಬೋಧಿಸತ್ತ್ವನನ್ನೂ ಹಿಡಿದುಕೊಂಡು, “ಮಣಿಚೋರ” ಎಂದು ಕ್ಸ ಕಾಲುಗಳಿಂದ ಹೊಡೆಯುತ್ತಾ, ಬೆನ್ನಹಿಂದೆ ಕೈಗಳನ್ನು ಕಟ್ಟ ಒಯ್ದು, “ಇವನು ಮಣಿ ಕದ್ದವನು” ಎಂದು ರಾಜನಿಗೆ ಕಾಣಿಸಿದನು.

ರಾಜನು “ಇವನ ತಲೆ ಕತ್ತರಿಸಿರಿ” ಎಂದು ಆಜ್ಞೆಮಾಡಿದನು. ಆಗ ರಾಜಪುರುಷರು ಅವನನ್ನು ಚೌಕಗಳಲ್ಲಿ ಕಶೆಗಳಿಂದ ಹೊಡೆಯುತ್ತಾ

೩೮ ಮಣಿಕಂಠ

ದಕ್ಷಿಣದ್ವಾರದ ಮೂಲಕ ನಗರದಿಂದ ಹೊರಗೆ ಕರೆದುಕೊಂಡು ಹೋದರು.

ಸುಜಾತೆಯೂ ಗಾಡಿಯನ್ನು ಬಿಟ್ಟು, ತೋಳುಗಳನ್ನು ಸೀಡಿ ಗೋಳಾಡುತ್ತಾ, ಸ್ತಾಮಿ, ನನ್ನಿಂದ ನಿನಗೆ ದುಃಖವಾಯಿತು” ಎಂದು ಹಿಂದೆಹಿಂದೆಯೇ ಹೋದಳು.

ರಾಜಪುರುಷರು ಇವನ ತಲೆ ಕತ್ತರಿನೋಣ” ಎಂದು ಬೋಧಿ ಸತ್ತ್ವನನ್ನು ಬೆನ್ನ ಮೇಲೆ ಮಲಗಿಸಿದರು. ಸುಜಾತೆಯು ಅದನ್ನು ಕಂಡು ತನ್ನ ಶೀಲಗುಣವನ್ನು ಧ್ಯಾನಿಸುತ್ತಾ, " ಶ್ರೀಲವಂತರಿಗೆ ಹಿಂಸೆ ಉಂಟುಮಾಡುವ ಪಾಪಸಾಹಸಿಕ ಮನುಷ್ಯರನ್ನು ತಡೆಯಲು ಸಮರ್ಥರಾದ ದೇವತೆಗಳು ಲೋಕದಲ್ಲಿ ಇಲ್ಲವೆಂದು ಕಾಣುತ್ತದೆ? ಎಂದು ಮೊದಲಾಗಿ ಗೋಳಾಡುತ್ತಾ, ದೇವತೆಗಳು ಇಲ್ಲ ಪ್ರವಾಸ ಹೋಗಿದ್ದಾರೆ. ಲೋಕಪಾಲರುಗಳೂ ಇಲ್ಲಿ ಇಲ್ಲ. ಅಸಂಯಮಿಗಳಾಗಿ ಸಹಸಾ ಕಾರ್ಯಮಾಡುವವರನ್ನು ತಡೆದಿಡುವವರು ಯಾರೂ ಇಲ್ಲ” ಎಂದಳು.

ಹೀಗೆ ಶೀಲಸಂಪನ್ನೆಯ ಗೋಳಾಟದಿಂದ ದೇವರಾಜನಾದ ಶಕ್ರನು ಕುಳಿತಿದ್ದ ಸೀಠವು ಬಿಸಿಯಾಯಿತು. ಶಕ್ರನು ನನ್ನನ್ನು ಶಕ್ರ ಪದವಿಯಿಂದ ಚ್ಯುತಿಗೊಳಿಸುವವರು ಯಾರು?” ಎಂದು ಧ್ಯಾನಿ ಸುತ್ತಾ, ಅಲ್ಲಿ ನಡೆದುದನ್ನು ತಿಳಿದು, “ವಾರಾಣಸಿರಾಜನು ಅತಿ ಕ್ರೂರ ಕಾರ್ಯ ಮಾಡುತ್ತಿದ್ದಾನೆ. ಶೀಲಸಂಪನ್ನೆಯಾದ ಸುಜಾತೆಯನು ಸಂಕಟಗೊಳಿಸುತ್ತಿದ್ದಾನೆ. ಈಗ ನಾನು ಹೋಗುವುದು ತಕ್ಕುದು” ಎಂದು ದೇವಲೋಕದಿಂದ ಇಳಿದು, ಆನೆಯ ಬೆನ್ನಮೇಲೆ ಕುಳಿತು ಹೋಗುತ್ತಿದ್ದ ಪಾನಿರಾಜನನ್ನು ತನ್ನ ಪ್ರಭಾವದಿಂದ ಇಳಿಸಿ, ತಲೆ ಕಡಿಯುವ ಸ್ಥಳದಲ್ಲಿ ಬೆನ್ನಮೇಲೆ ಮಲಗಿಸಿ, ಬೋಧಿಸತ್ತ್ವನನ್ನು ಮೇಲೆಬ್ಬಿಸಿ, ಸರ್ವಾಲಂಕಾರಗಳಿಂದ ಅಲಂಕರಿಸಿ, ರಾಜವೇಷ ಹಾಕಿಸಿ, ಆನೆಯ ಕತ್ತಿನ ಮೇಲೆ ಕುಳ್ಳಿರಿಸಿದನು.

ಕೊಡಲಿಯನ್ನು ಎತ್ತಿ ತಲೆ ಕತ್ತರಿಸುವವರು ರಾಜನ ತಲೆ ಕತ್ತರಿಸಿ ದರು, ಕತ್ತರಿಸಿದಾಗ ಅವರಿಗೆ ಅದು ರಾಜನ ತಲೆಯೆಂದು ತಿಳಿಯಿತು.

ಮಣಿಜೋರೆ ೩೯

ದೇವರಾಜನಾದ ಶಕ್ರನು ಕಣ್ಣಿಗೆ ಕಾಣುವ ಶರೀರದಿಂದ ಬೋಧಿ ಸತ್ತೃನ ಬಳಿಗೆ ಹೋಗಿ, ಬೋಧಿಸತ್ವ್ವನಿಗೆ ರಾಜ್ಯಾಭಿಷೇಕ ಮಾಡಿ, ಸುಜಾತೆಗೆ ಪಟ್ಟಿದರಾಣಿಯ ಪದವಿಯನ್ನು ಕೊಟ್ಟಿ ನು. ಅಮಾತ್ಯರೂ ಬ್ರಾ ಹ್ಮಣಗೃಹಪತಿಗಳು ಮೊದಲಾದವರೂ ದೇವರಾಜನಾದ ಶಕ್ರನನ್ನು ಕಂಡು, “ಅಧರ್ಮಿಕರಾಜನು ಸಾಯಿಸಲ್ಪಟ್ಟನು. ಈಗ ಶಕ್ರನು ಕೊಟ್ಟ ಧರ್ಮಿಕರಾಜನನ್ನು ಪಡೆದೆವು” ಎಂದು ಸಂತೋಷಪಟ್ಟರು.

ಶಕ್ರನೂ ಆಕಾಶದಲ್ಲಿ ನಿಂತು, “ಶಕ್ರನು ಕೊಟ್ಟಿ ರುವ ಪ್ರ ರಾಜನು ಇಂದು ಮೊದಲಾಗಿ ಧರ್ಮದಿಂದ ರಾಜ್ಯವಾಳುವನು. ರಾಜನು ಅಧರ್ಮಿಕನಾದರೆ, ಮಳೆ ಅಕಾಲದಲ್ಲಿ ಆಗುವುದಲ್ಲದೆ ಕಾಲದಲ್ಲಿ ಆಗದು. ಕ್ಸಾಮಭಯ, ರೋಗಭಯ, ಶಸ್